ಯೋಗ ಡೇ: ಸಿದ್ದರಾಮಯ್ಯ ಜೊತೆಗೆ ವೇದಿಕೆ ಹಂಚಿಕೊಂಡದ್ದು ಅದೃಷ್ಟ ಎಂದ ನಟಿ ಶ್ರೀಲೀಲಾ

ಬಳ್ಳಾರಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಬಳ್ಳಾರಿಗೆ ಬಂದಿದ್ದೇನೆ. ಯೋಗ ಡೇಯಲ್ಲಿ ಭಾಗಿ ಆಗಿದ್ದು ತುಂಬಾ ಸಂತೋಷ ಆಗ್ತಿದೆ, ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಅದೃಷ್ಟ ಎಂದು ನಟಿ ಶ್ರೀಲೀಲಾ ಹೇಳಿದರು.
ಬಳ್ಳಾರಿಯ ಜಿಂದಾಲ್ ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾತನಾಡಿದ ಅವರು, ಸೂರ್ಯನಾಮ, ಪ್ರಾಣಾಯಾಮ ಮನುಷ್ಯನಿಗೆ ಬಹಳ ಮುಖ್ಯ. ನಾನು ಮನೆಯಲ್ಲಿ ಇದ್ದಾಗ ಯೋಗ ಮಾಡುತ್ತೇನೆ. ಬಳ್ಳಾರಿಗೆ ಬಂದಿದ್ದು ನನ್ನ ಮನೆಗೆ ಬಂದಂಗೆ ಅನುಭವ ಆಯ್ತು ಎಂದರು.
ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಅದೃಷ್ಟ, ಯಾವೆಲ್ಲ ಸಿನಿಮಾ ಮಾಡ್ತಿದ್ದಿಯಾ ಅಂತ ಕೇಳಿದ್ರು ಎಂದ ಅವರು, ದೊಡ್ಡವರ ಜೊತೆಗೆ ವೇದಿಕೆ ಹಂಚಿಕೊಂಡಾಗ ಮತ್ತಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ ಎಂದರು.
ನಟ ದರ್ಶನ್ ವಿರುದ್ಧ ಕೇಳಿಬಂದ ಕೊಲೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶನ್ನೆಗೆ ಪ್ರತಿಕ್ರಿಯೆ ನೀಡಲು ನಟಿ ಶ್ರೀಲೀಲಾ ಹಿಂದೇಟು ಹಾಕಿದರು. ಈ ವೇಳೆ ಒನ್ಲಿ ಯೋಗ ಡೇ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ವಚನಾನಂದ ಸ್ವಾಮೀಜಿ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97