ನಿಫಾ: ಕೇರಳ ಗಡಿಯಲ್ಲಿ ತೀವ್ರ ತಪಾಸಣೆ

chamarajanagara 1
15/09/2023

ಚಾಮರಾಜನಗರ : ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳ ಗಡಿ ಪ್ರದೇಶದ ಕೋಯಿಕ್ಕೊಡ್ ಜಿಲ್ಲೆಯಲ್ಲಿ ನಿಪಾ ವೈರಾಣು ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಗುಂಡ್ಲುಪೇಟೆ ತಾಲ್ಲೂಕಿನ ಗಡಿ ಚೆಕ್ಪೋಸ್ಟ್ ಮೂಲೆಹೊಳೆಯಲ್ಲಿ ಅರಣ್ಯ ಸಿಬ್ಬಂದಿಗಳು ಬೀಡುಬಿಟ್ಟು ಕೇರಳದಿಂದ ತಾಲ್ಲೂಕಿನ ಕಡೆಗೆ ಬರುವ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸುತ್ತಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಅವರ ನೇತೃತ್ವದಲ್ಲಿ ಕೇರಳದಿಂದ ಬರುವ ವಾಹನಗಳ ಚಾಲಕ, ಸಹಾಯಕ ಮತ್ತು ಸಾರ್ವಜನಿಕರನ್ನು ಜ್ವರ ತಪಾಸಣೆ ಮಾಡುತ್ತಿದ್ದಾರೆ.

ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಜ್ವರದಿಂದ ಬಳಲುತ್ತಿದ್ದರೇ ಅಂತವರನ್ನು ಬಸ್ ಮತ್ತು ವಾಹನದಲ್ಲಿ ಕರೆದುಕೊಂಡು ಬರಬಾರದು ಎಂಬ ಎಚ್ಚರಿಕೆ ನೀಡಿ ಬಿತ್ತಿಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಶುಕ್ರವಾರದಿಂದ ಗಡಿ ಭಾಗದ ಗ್ರಾಮಗಳಿಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version