12:36 PM Thursday 21 - August 2025

ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ: ವಿಮಾನ ಪ್ರಯಾಣಿಕರಿಗೆ ಸಂಕಷ್ಟ

02/10/2024

ಇಸ್ರೇಲ್ ಮೇಲೆ ಕ್ಷಿಪಣಿಗಳ ಮೂಲಕ ಇರಾನ್‌ ದಾಳಿ ನಡೆಸಿದ ಬೆನ್ನಲ್ಲೇ ವಿಮಾನ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ದುಬೈನಿಂದ ಕರ್ನಾಟಕಕ್ಕೆ ಬರುತ್ತಿದ್ದ ಪ್ರಯಾಣಿಕರನೇಕರು ಟರ್ಕಿಯ ಇಸ್ತಾಂಬುಲ್ ನಲ್ಲಿ ಸಿಲುಕಿದ್ದಾರೆ.

ಸ್ವಿಜರ್ಲ್ಯಾಂಡ್ ರಾಜಧಾನಿ ಜ್ಯೂರಿಕ್‌ನಿಂದ ದುಬೈಗೆ ಬಂದು ದುಬೈನಿಂದ ಬೆಂಗಳೂರಿಗೆ ಕನ್ನಡಿಗರು ಬರುತ್ತಿದ್ದರು. ಈ ವೇಳೆ ಇರಾನ್‌ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಕ್ಷಿಪಣಿ ದಾಳಿಯ ಬೆನ್ನಲ್ಲೇ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ ಲ್ಯಾಂಡ್‌ ಮಾಡಲಾಗಿದೆ. ಕ್ಷಿಪಣಿ ದಾಳಿಯಿಂದ ಕರ್ನಾಟಕದ ಪ್ರಯಾಣಿಕರ ಜೊತೆ ಸುಮಾರು 300 ಮಂದಿ ಪ್ರಯಾಣಿಕರು ವಿಮಾನದಲ್ಲಿ ಇದ್ದಾರೆ.
ಜ್ಯೂರಿಕ್‌ ಕಾಲಮಾನ ಮಧ್ಯಾಹ್ನ 3:25ಕ್ಕೆ ಟೇಕಾಫ್‌ ಆದ ವಿಮಾನ ರಾತ್ರಿ10 ಗಂಟೆಗೆ ದುಬೈ ತಲುಪಬೇಕಿತ್ತು. ಸದ್ಯ ಇರಾನ್‌ ಮತ್ತು ಇರಾಕ್‌ ವಾಯುಸೀಮೆ ಬಂದ್‌ ಆಗಿದ್ದು ಯಾವುದೇ ವಿಮಾನ ಹಾರಾಟ ನಡೆಸುತ್ತಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version