7:05 PM Wednesday 28 - January 2026

ಗಾಝಾ ಮೇಲೆ ಅಮಾನವೀಯ ದಾಳಿ: ಕದನ ವಿರಾಮ ಒಪ್ಪಂದಕ್ಕೆ ಹಮಾಸ್ ಓಕೆ ಅಂದ್ರು ಸೈಲೆಂಟ್ ಆಗಿ ಕೂತ ಇಸ್ರೇಲ್..!

07/05/2024

ಗಾಝಾದ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿರುದ್ಧ ಜಾಗತಿಕವಾಗಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವಂತೆಯೇ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಇಸ್ರೇಲ್ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ. ಕತಾರ್ ಮತ್ತು ಈಜಿಪ್ಟ್ ನೇತೃತ್ವದಲ್ಲಿ ಮಂಡಿಸಲಾಗಿರುವ ಕದನ ವಿರಾಮ ಒಪ್ಪಂದಕ್ಕೆ ಹಮಾಸ್ ಈಗಾಗಲೇ ಒಪ್ಪಿಕೊಂಡಿದ್ದು ಇಸ್ರೇಲ್ ಇನ್ನೂ ತನ್ನ ಅಭಿಪ್ರಾಯವನ್ನು ತಿಳಿಸಿಲ್ಲ. ಈ ನಡುವೆ ಈ ಕದನ ವಿರಾಮ ಒಪ್ಪಂದದ ಕುರಿತಂತೆ ಗಾಝಾದ ಮಂದಿ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಗಾಝಾದ ಮೇಲೆ ಇಸ್ರೇಲ್ ನಡೆಸಿರುವ ದಾಳಿಗೆ ಏಳು ತಿಂಗಳು ತುಂಬುತ್ತಾ ಬಂದಿದ್ದು ಈಗಾಗಲೇ ರೂ.34,000 ಕ್ಕಿಂತಲೂ ಅಧಿಕ ಮಂದಿ ಸಾವಿಗೆಡಾಗಿದ್ದಾರೆ ಮತ್ತು ಎಪ್ಪತ್ತೆಂಟು ಸಾವಿರಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈವರೆಗೆ ಹಲವು ಸುತ್ತುಗಳ ಮಾತುಕತೆ ನಡೆದಿದ್ದರೂ ಕದನ ವಿರಾಮ ಜಾರಿಯಾಗುವುದಕ್ಕೆ ಸಾಧ್ಯ ಆಗಿಲ್ಲ.

ಶಾಶ್ವತ ಕದನ ವಿರಾಮಕ್ಕಾಗಿ ಹಮಾಸ್ ಆಗ್ರಹಿಸುತ್ತಿದೆ ಮತ್ತು ಸುಮಾರು 15 ಲಕ್ಷದಷ್ಟು ಇರುವ ರಫಾ ನಿರಾಶ್ರಿತ ಕೇಂದ್ರದ ಮೇಲೆ ಇಸ್ರೇಲ್ ದಾಳಿ ಮಾಡುವುದನ್ನು ವಿರೋಧಿಸುತ್ತಿದೆ. ಈಜಿಪ್ಟ್ ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಇಸ್ರೇಲ್ 40 ದಿನಗಳವರೆಗೆ ಯುದ್ಧವಿರಾಮ ಘೋಷಿಸುವುದಕ್ಕೆ ಒಪ್ಪಿಕೊಂಡಿದೆ ಮತ್ತು ರಫಾದ ಮೇಲೆ ದಾಳಿ ಮಾಡುವ ಆಯ್ಕೆಯನ್ನು ಕಾಯ್ದಿರಿಸಿಕೊಂಡಿದೆ. ಈ ನಡುವೆ ಗಾಝಾದ ಮಂದಿ ಯುದ್ಧ ವಿರಾಮದ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version