ತಾನು ಇಸ್ಲಾಮಿನ ವಿರೋಧಿಯಲ್ಲ: ಖಾಸಗಿ ಟಿವಿ ವಾಹಿನಿ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿಕೆ

07/05/2024

ತಾನು ಇಸ್ಲಾಮಿನ ವಿರೋಧಿಯಲ್ಲ, ಮುಸ್ಲಿಂ ಮೀಸಲಾತಿಯ ವಿರೋಧಿಯೂ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟೈಮ್ಸ್ ನೌ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಮುಸ್ಲಿಂ ದ್ವೇಷದ ಭಾಷಣಕ್ಕಾಗಿ ಕಳೆದೆರಡು ವಾರಗಳಿಂದ ತೀವ್ರ ಚರ್ಚೆಗೆ ಮತ್ತು ಟೀಕೆಗೆ ಒಳಗಾಗಿರುವ ಪ್ರಧಾನಿ ಇದೀಗ ತಾನು ಮುಸ್ಲಿಮರ ಪ್ರಗತಿಯನ್ನು ಬಯಸುವವ ಎಂಬ ರೀತಿಯಲ್ಲಿ ಬಿಂಬಿಸಿಕೊಂಡಿದ್ದಾರೆ.

ನಾವು ಇಸ್ಲಾಂ ವಿರೋಧಿಗಳಲ್ಲ. ಆದರೆ ನಾವು ಮುಸ್ಲಿಮರನ್ನು ವಿರೋಧಿಸುವವರು ಎಂದು ನೆಹರು ಕಾಲದಿಂದಲೇ ಚಿತ್ರಿಸಲಾಗಿದೆ. ಮುಸ್ಲಿಂ ವಿರೋಧಿ ಎಂದು ಬಿಂಬಿಸಿ ಲಾಭ ಪಡೆದುಕೊಳ್ಳುವ ಉದ್ದೇಶ ಕಾಂಗ್ರೆಸ್‌ನದ್ದಾಗಿದೆ. ಆದರೆ ಈಗ ಮುಸ್ಲಿಂ ಸಮುದಾಯವು ಸತ್ಯವನ್ನು ಅರಿಯುತ್ತಿದೆ. ತಾನು ತಲಾಕ್ ನಿಯಮವನ್ನು ಜಾರಿಗೊಳಿಸಿದಾಗ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ನಾನೇನೆಂದು ಅರ್ಥವಾಗಿದೆ. ಕೊರೋನ ವ್ಯಾಕ್ಸಿನ್ ಮತ್ತು ಆಯುಷ್ಮಾನ್ ಕಾರ್ಡನ್ನು ವಿತರಿಸಿದಾಗ ಮೋದಿ ಸತ್ಯವಂತ ಎಂಬುದು ಅವರಿಗೆ ಗೊತ್ತಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಮುಸ್ಲಿಮರಿಗೆ ಮೀಸಲಾತಿ ಕೊಡಬಾರದೆಂದು ನಾನು ಹೇಳುತ್ತಿಲ್ಲ. ಮೀಸಲಾತಿಗೆ ಧರ್ಮ ಆಧಾರವಾಗಬಾರದು ಎಂಬುದೇ ನನ್ನ ವಾದ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version