2:13 PM Saturday 6 - December 2025

ಉಪ್ಪಿಗಿಂತ ರುಚಿ ಬೇರೆ ಇಲ್ಲ, ಆದ್ರೆ ಅತೀಯಾದ್ರೆ ಅದೆಷ್ಟು ಅಪಾಯಕಾರಿ ಗೊತ್ತಾ?

salt
29/03/2024

ಉಪ್ಪಿಗಿಂತ ರುಚಿ ಬೇರೆ ಇಲ್ಲ, ಯಾವುದೇ ಅಡುಗೆಯಾಗಲಿ ಉಪ್ಪು ಇಲ್ಲದಿದ್ದರೆ ಅದು ನಮ್ಮ ನಾಲಿಗೆಗೆ ರುಚಿಸುವುದಿಲ್ಲ.  ಆದರೆ ಅತಿಯಾಗಿ ಉಪ್ಪು ಸೇವನೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂದು  ಆಹಾರ ತಜ್ಞರು ಹೇಳುತ್ತಾರೆ.

ಹೀಗಾಗಿ ಪ್ರತಿದಿನ ಸಾಧ್ಯವಾದಷ್ಟು ನಿಯಮಿತ ಪ್ರಮಾಣದಲ್ಲಿ ಮಾತ್ರ ಅಡುಗೆ ಪದಾರ್ಥಗಳಲ್ಲಿ ಉಪ್ಪು ಸೇರಿಸಿ ತಿನ್ನುವುದು ಉತ್ತಮ. ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಐದು ಗ್ರಾಂ ನಷ್ಟು ಉಪ್ಪು ಮಾತ್ರ ಸೇವಿಸುವುದು ಒಳ್ಳೆಯದು.

ಉಪ್ಪಿನ ಪ್ರಮಾಣ ನಮ್ಮ ದೇಹ ಕಡಿಮೆ ಸೇರಿದಷ್ಟು ಸೋಡಿಯಂ ಕಡಿಮೆ ಸಿಕ್ಕಂತೆ ಆಗುತ್ತದೆ. ಇದರಿಂದ ನಮ್ಮ ಕಿಡ್ನಿಗಳು ಹೆಚ್ಚುವರಿ ಪ್ರಮಾಣದ ಬೇಡದ ತ್ಯಾಜ್ಯವನ್ನು ಹೊರಗೆ ಹಾಕಲು ಸಹಾಯವಾಗುತ್ತದೆ. ಕಿಡ್ನಿಗಳ ಮೇಲಿನ ಹಾಗೂ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇರಿಸುವುದರಿಂದ ಒಬ್ಬ ವ್ಯಕ್ತಿಗೆ ಹೃದಯಾಘಾತ  ಕೂಡ ಆಗಬಹುದು ಜೊತೆಗೆ ಪಾರ್ಶ್ವವಾಯು ಕೂಡ ಸಂಭವಿಸಬಹುದು. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಉಪ್ಪು ಸೇವಿಸುವು ದರಿಂದ ಹೃದಯ ರಕ್ತನಾಳದ ಕಾಯಿಲೆಗಳು ದೂರವಾಗಿ ಹೃದಯ ಆರೋಗ್ಯವಾಗಿರುತ್ತದೆ.

ಮೊದಲೇ ಹೇಳಿದಂತೆ ಉಪ್ಪಿನ ಪ್ರಮಾಣ ಹೆಚ್ಚು ಸೇವಿಸಿದರೆ ದೇಹದಲ್ಲಿ ನೀರಿನ ಅಂಶ ಹೆಚ್ಚು ಶೇಖರಣೆಯಾಗುತ್ತದೆ. ಇದು ಸಹಜವಾಗಿ ಹೊಟ್ಟೆ ಉಬ್ಬರ ಕಂಡುಬರುವಂತೆ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಉಪ್ಪನ್ನು ಆಹಾರದಲ್ಲಿ ಮಿತವಾಗಿ ಬಳಸಬೇಕು.

ಉಪ್ಪು ನಮ್ಮ ದೇಹದ ಮೂಳೆಗಳಿಂದ ಹೆಚ್ಚುವರಿ ಕ್ಯಾಲ್ಸಿಯಂ ಅನ್ನು ಹೊರಹಾಕಲು ನೋಡುತ್ತದೆ. ಇದರಿಂದ ಮೂಳೆಗಳಿಗೆ ಸಂಬಂಧ ಪಟ್ಟಂತೆ ದೌರ್ಬಲ್ಯ ಎದುರಾಗುತ್ತದೆ ಜೊತೆಗೆ ಮೂಳೆಗಳ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ.

ಮಿತ ಪ್ರಮಾಣದಲ್ಲಿ ಸೋಡಿಯಂ ನಮ್ಮ ದೇಹ ಸೇರುವುದರಿಂದ ಕಿಡ್ನಿಗಳ ಆರೋಗ್ಯ ಚೆನ್ನಾಗಿರುತ್ತದೆ. ಕಿಡ್ನಿಗಳ ಮೇಲಿನ ಒತ್ತಡ ಕಡಿಮೆ ಯಾಗಿ ಅವುಗಳ ಕಾರ್ಯ ಚಟುವಟಿಕೆ ಚೆನ್ನಾಗಿ ನಡೆಯುತ್ತದೆ. ತುಂಬಾ ಜನರಿಗೆ ಕಿಡ್ನಿಗಳ ಸಮಸ್ಯೆ ಕಂಡು ಬರುವ ಸಾಧ್ಯತೆ ಕೂಡ ಇದರಿಂದ ಕಡಿಮೆಯಾಗುತ್ತದೆ.

ಸಾಧ್ಯವಾದಷ್ಟು ಉಪ್ಪಿನಲ್ಲಿ ಅಯೋಡಿನ್ ಪ್ರಮಾಣ ಇರುವುದಾಗಿ ಖಚಿತಪಡಿಸಿಕೊಳ್ಳಿ. ಇದು ಮಕ್ಕಳ ಹಾಗೂ ದೊಡ್ಡವರ ಮೆದುಳಿನ ಬೆಳವಣಿಗೆಗೆ ಹಾಗೂ ಬುದ್ಧಿಶಕ್ತಿಗೆ ಬಹಳ ಅನುಕೂಲಕರ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version