ಅಲ್ಪಸಂಖ್ಯಾತರ ಮೀಸಲಾತಿ ಚರ್ಚೆ: ನಾಯ್ಡುರನ್ನು ತರಾಟೆಗೆ ತೆಗೆದುಕೊಂಡ ಆಂಧ್ರ ಸಿಎಂ

ಅಲ್ಪಸಂಖ್ಯಾತರ ಮೀಸಲಾತಿ ಕುರಿತು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧ ನಡೆಯುತ್ತಿರುವ ಹೊತ್ತಿನಲ್ಲೇ ಆಂಧ್ರಪ್ರದೇಶದಲ್ಲಿನ ಮುಸ್ಲಿಮರ ಶೇಕಡಾ ನಾಲ್ಕರಷ್ಟು ಮೀಸಲಾತಿಯು ಉಳಿಯಲಿದ್ದು, ಈ ವಿಚಾರದಲ್ಲಿ ಇದು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಂತಿಮ ಮಾತು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಕರ್ನೂಲ್ ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಒಂದು ಕಡೆ ಮುಸ್ಲಿಮರ ಶೇ. ೪ರಷ್ಟು ಮೀಸಲಾತಿಯನ್ನು ತೆಗೆದು ಹಾಕುವ ನಿಲುವು ಹೊಂದಿರುವ ಬಿಜೆಪಿಯೊಂದಿಗೆ ಕೈಜೋಡಿಸಿರುವ “ಚಂದ್ರಬಾಬು ನಾಯ್ಡು, ಮತ್ತೊಂದೆಡೆ, ಅಲ್ಪಸಂಖ್ಯಾತರ ಮತಗಳನ್ನು ಗಳಿಸಲು ಹೊಸ ನಾಟಕದೊಂದಿಗೆ ಬರುತ್ತಿದ್ದಾರೆ. ನೀವು ಊಸರವಳ್ಳಿಯಂಥ ಚಂದ್ರಬಾಬು ನಾಯ್ಡುವನ್ನು ಕಂಡಿರಾ? ಏನೇ ಬರಲಿ, ಮುಸ್ಲಿಮರ ಶೇ. ೪ರಷ್ಟು ಮೀಸಲಾತಿಯು ಉಳಿಯಲಿದೆ. ಚಂದ್ರಬಾಬು ನಾಯ್ಡುಗೆ ನನ್ನ ಒಂದೇ ಪ್ರಶ್ನೆಯೆಂದರೆ, ಬಿಜೆಪಿ ಸರಕಾರವು ಶೇ. ೪ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಪ್ರತಿಜ್ಞೆಗೈದಿರುವಾಗ, ಅವರು ಬಿಜೆಪಿ ಜೊತೆ ಮೈತ್ರಿ ಮುಂದುವರಿಸಿರುವುದೇಕೆ?” ಎಂದು ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth