7:31 PM Saturday 18 - October 2025

ಬಾಲಕನ ಮೃತದೇಹದಲ್ಲಿ ಕಿವಿ-ಮೂಗು ಇರಲಿಲ್ಲ | ನಾಪತ್ತೆಯಾಗಿದ್ದ ಬಾಲಕನ ಭೀಕರ ಸಾವು

28/12/2020

ಜೈಪುರ: ಬಾಲಕನೋರ್ವನನ್ನು ಹಣಕ್ಕಾಗಿ ಸಂಬಂಧಿಕರೇ ಭೀಕರವಾಗಿ ಹತ್ಯೆ ಮಾಡಿದ ಅಮಾನವೀಯ ಘಟನೆ ಜೈಪುರದ ಅಲ್ವಾರ್ ನವಾಲಿ ಗ್ರಾಮದಲ್ಲಿ ನಡೆದಿದ್ದು, ಬಾಲಕ ನಾಪತ್ತೆಯಾದ ಬಳಿಕ ಆತನ ಮೃತದೇಹ ಪತ್ತೆಯಾಗಿತ್ತು. ಆದರೆ ಮೃತದೇಹದ ಹಲವು ಅಂಗಗಳನ್ನು ಕತ್ತರಿಸಿರುವುದು ಕಂಡು ಬಂದಿದೆ.

11 ವರ್ಷದ ಬಾಲಕ ಶನಿವಾರ ಬೆಳಗ್ಗೆ 11 ಗಂಟೆಗೆ ಬಾಲಕ ನಾಪತ್ತೆಯಾಗಿದ್ದ. ಭಾನುವಾರ ಬಾಲಕನ ಮೃತದೇಹ ಸ್ಥಳೀಯ ಜಮೀನಿನಲ್ಲಿ ಪತ್ತೆಯಾಗಿದೆ. ಮೃತದೇಹದ ಮೂಗು ಹಾಗೂ ಕಿವಿಯನ್ನು ಕತ್ತರಿಸಲಾಗಿದೆ.

ಮೇಲ್ನೋಟಕ್ಕೆ ಇದನ್ನು ಗಮನಿಸಿದರೆ, ಯಾವುದೋ ಅನಿಷ್ಠ ಆಚರಣೆಗಾಗಿ ಬಾಲಕನನ್ನು ಬಲಿ ನೀಡಿರುವಂತೆ ಕಂಡು ಬಂದಿದೆ. ಈ ಬಗ್ಗೆ ಬಾಲಕ ತಂದೆ  ಪೊಲೀಸರಿಗೆ ದೂರು ನೀಡಿದ್ದು, ತನ್ನ ಹಲವು ಸಂಬಂಧಿಕರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹಣಕ್ಕಾಗಿ ತನ್ನ ಮಗನನ್ನು ಸಂಬಂಧಿಕರೇ ಹತ್ಯೆ ಮಾಡಿದ್ದಾರೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version