ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: 12 ತಿಂಗಳ ಉಚಿತ ಕ್ಯಾನ್ವಾ ಪ್ರೊ ಆಫರ್ ಘೋಷಣೆ!
ಜಿಯೋ ಬಳಕೆದಾರರಿಗೆ ರಿಲಯನ್ಸ್ ಜಿಯೋ ಸಂಸ್ಥೆಯು ಅತ್ಯಕರ್ಷಕ ಕೊಡುಗೆಯೊಂದನ್ನು ಘೋಷಿಸಿದೆ. ಜಿಯೋ ಮತ್ತು ಜನಪ್ರಿಯ ವಿನ್ಯಾಸ ವೇದಿಕೆಯಾದ ‘ಕ್ಯಾನ್ವಾ’ (Canva) ಪಾಲುದಾರಿಕೆ ಮಾಡಿಕೊಂಡಿದ್ದು, ಇದರಡಿ ಅರ್ಹ ಗ್ರಾಹಕರಿಗೆ ₹4,000 ಮೌಲ್ಯದ ಕ್ಯಾನ್ವಾ ಪ್ರೊ ಅಥವಾ ಕ್ಯಾನ್ವಾ ಪ್ರೊ ಲೈಟ್ ಅನ್ನು 12 ತಿಂಗಳವರೆಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.
ಈ ಆಫರ್ ಇಂದಿನಿಂದ (ಸೆಪ್ಟೆಂಬರ್ 16) ಅಧಿಕೃತವಾಗಿ ಪ್ರಾರಂಭವಾಗಿದ್ದು, ಮೈಜಿಯೋ (MyJio) ಅಪ್ಲಿಕೇಶನ್ ಮೂಲಕ ಕೆಲವೇ ಟ್ಯಾಪ್‌ಗಳಲ್ಲಿ ಇದನ್ನು ಸಕ್ರಿಯಗೊಳಿಸಬಹುದಾಗಿದೆ.
ಯಾವ ರೀಚಾರ್ಜ್‌ಗೆ ಯಾವ ಆಫರ್ ಲಭ್ಯ?
- ಗ್ರಾಹಕರು ಮಾಡಿಸುವ ಜಿಯೋ ರೀಚಾರ್ಜ್ ಯೋಜನೆಗೆ (Recharge Plan) ಅನುಗುಣವಾಗಿ ಈ ಕೊಡುಗೆ ಲಭ್ಯವಿರಲಿದೆ:
- ರೂ. 399 ರ ಪ್ಲಾನ್: ಈ ಯೋಜನೆಯನ್ನು ಆಯ್ಕೆ ಮಾಡುವವರಿಗೆ ಸಂಪೂರ್ಣ ಕ್ಯಾನ್ವಾ ಪ್ರೊ ಉಚಿತವಾಗಿ ಸಿಗಲಿದೆ.
- ರೂ. 349 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಯೋಜನೆಗಳು (ಆಯ್ದ 2GB/ದಿನ): ಇಂತಹ ಯೋಜನೆಗಳಿಗೆ ಕ್ಯಾನ್ವಾ ಪ್ರೊ ಲೈಟ್ ಆಫರ್ ಲಭ್ಯವಿರುತ್ತದೆ.
ವಿಶೇಷತೆ: ಈ ಆಫರ್‌ಗೆ ಯಾವುದೇ ಹೆಚ್ಚುವರಿ ಅಥವಾ ಗುಪ್ತ ಶುಲ್ಕಗಳು ಇರುವುದಿಲ್ಲ.
ಯಾರಿಗೆ ಹೆಚ್ಚು ಪ್ರಯೋಜನ?
ಈ ವಿಶೇಷ ಕೊಡುಗೆಯು ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್‌ಗಳು (ವಿಷಯ ರಚನೆಕಾರರು), ವೃತ್ತಿಪರರು ಮತ್ತು ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಕ್ಯಾನ್ವಾ ಸಹಾಯದಿಂದ ಮೊಬೈಲ್ ನಲ್ಲಿಯೇ ಶಾಲಾ ಪ್ರಾಜೆಕ್ಟ್ ಗಳು, ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು, ಪ್ರಸ್ತುತಿಗಳು (Presentations), ಮಾರ್ಕೆಟಿಂಗ್ ಸಾಮಗ್ರಿಗಳು ಹಾಗೂ ಹಬ್ಬದ ಶುಭಾಶಯಗಳನ್ನು ಸುಲಭವಾಗಿ ವಿನ್ಯಾಸಗೊಳಿಸಬಹುದು. ವಿಶೇಷವೆಂದರೆ, ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿಯೂ ವಿಷಯಗಳನ್ನು ರಚಿಸಲು ಇದು ಅವಕಾಶ ಕಲ್ಪಿಸುತ್ತದೆ.
ಕ್ಯಾನ್ವಾ ಪ್ರೊ ಮತ್ತು ಪ್ರೊ ಲೈಟ್ ವೈಶಿಷ್ಟ್ಯಗಳು:
- ಕ್ಯಾನ್ವಾ ಪ್ರೊ ಲೈಟ್: ಲಕ್ಷಾಂತರ ಪ್ರೀಮಿಯಂ ಟೆಂಪ್ಲೇಟ್‌ಗಳು, ಫೋಟೋಗಳು, ವೀಡಿಯೊಗಳು, ಫಾಂಟ್‌ಗಳು, ಬ್ಯಾಕ್‌ಗ್ರೌಂಡ್ ರಿಮೂವರ್, ಮ್ಯಾಜಿಕ್ ರೀಸೈಜ್ ಮತ್ತು 50 GB ಕ್ಲೌಡ್ ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ.
- ಕ್ಯಾನ್ವಾ ಪ್ರೊ: ಮೇಲಿನ ಎಲ್ಲ ವೈಶಿಷ್ಟ್ಯಗಳ ಜೊತೆಗೆ ಕ್ಯಾನ್ವಾ AI, ಕಂಟೆಂಟ್ ಪ್ಲಾನರ್, ಹೆಚ್ಚಿನ AI ಮಿತಿಗಳು ಮತ್ತು ಬರೋಬ್ಬರಿ 100 GB ಕ್ಲೌಡ್ ಸ್ಟೋರೇಜ್ ನಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
ಆಫರ್ ಪಡೆಯುವುದು ಹೇಗೆ?
ಅರ್ಹ ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೈಜಿಯೋ (MyJio) ಅಪ್ಲಿಕೇಶನ್ ತೆರೆದು, ಅಲ್ಲಿರುವ ಕ್ಯಾನ್ವಾ ಕೊಡುಗೆಯ (Canva Offer) ಮೇಲೆ ಟ್ಯಾಪ್ ಮಾಡುವ ಮೂಲಕ ಸುಲಭವಾಗಿ ಸಕ್ರಿಯಗೊಳಿಸಿ ತಕ್ಷಣವೇ ವಿನ್ಯಾಸಗಳನ್ನು ರಚಿಸಲು ಪ್ರಾರಂಭಿಸಬಹುದು.
ಈ ಸಹಭಾಗಿತ್ವದ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷೆ ಕಿರಣ್ ಥಾಮಸ್, “ಈ ಪಾಲುದಾರಿಕೆಯ ಮೂಲಕ ಲಕ್ಷಾಂತರ ಭಾರತೀಯರಿಗೆ AI ಆಧಾರಿತ ವಿನ್ಯಾಸ ಸಾಧನಗಳನ್ನು ಉಚಿತವಾಗಿ ತಲುಪಿಸಲು ಜಿಯೋ ಬಯಸಿದೆ. ಇದರಿಂದ ವಿದ್ಯಾರ್ಥಿಗಳು, ಸೃಷ್ಟಿಕರ್ತರು ಮತ್ತು ಸಣ್ಣ ಉದ್ಯಮಗಳು ತಮ್ಮದೇ ಆದ ಆಯ್ಕೆಯ ಭಾಷೆಯಲ್ಲಿ ಕಲಿಯಲು ಮತ್ತು ಕೆಲಸ ಮಾಡಲು ಇದು ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























