3:48 AM Wednesday 20 - August 2025

ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿದ ಮಹಿಳೆ: ವ್ಯಕ್ತಿಯಿಂದ ಪೊಲೀಸರಿಗೆ ದೂರು

mobile call
17/08/2022

ಉಪ್ಪಿನಂಗಡಿ: ಅಶ್ಲೀಲ ಮಾತುಗಳೊಂದಿಗೆ ಮೊಬೈಲ್ ಕಾಲ್ ಮಾಡಿ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಉಪ್ಪಿನಂಗಡಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗೆ  ಮೊಬೈಲ್ ಕರೆ ಮಾಡಿದ ಮಹಿಳೆಯೋರ್ವರು ತೀರಾ ಮುಜುಗರವೆನಿಸುವ  ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾಳೆನ್ನಲಾಗಿದೆ.

ಮಹಿಳೆಯ ಈ ನಡೆಗೆ ವಿರೋಧ ವ್ಯಕ್ತಪಡಿಸಿದರೂ 3-4 ಬಾರಿ ಕರೆ ಮಾಡಿ ವಿಕೃತ ವರ್ತನೆ ತೋರಿದಾಗ ಇದೊಂದು  ಬ್ಲ್ಯಾಕ್ ಮೇಲ್ ಜಾಲದ  ಕೃತ್ಯವೆಂದು  ಶಂಕಿಸಿ  ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version