ಕರ್ನಾಟಕ ಸರ್ಕಾರ ನಾಪತ್ತೆ: ದುರ್ಬಿನ್ ಹಿಡಿದು ಹುಡುಕಾಟ!

chamarajanagara
03/11/2023

ಚಾಮರಾಜನಗರ : ಕಾವೇರಿ ನೀರು ವಿಚಾರದಲ್ಲಿ ಕರ್ನಾಟಕ ಸರ್ಕಾರ ನಾಪತ್ತೆಯಾಗಿದೆ.ಆ ಸರ್ಕಾರ ವನ್ನು ಹುಡುಕಿ ಕೊಡಿ ಎಂದು ಕರ್ನಾಟಕ ಸೇನಾಪಡೆ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಕಣ್ಣಿಗೆ ದುರ್ಬಿನ್ ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ-209 ಹಾದು ಹೋಗಿರುವ ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ದುರ್ಬಿನ್ ಹಿಡಿದು ಜಮಾಯಿಸಿದ ಪ್ರತಿಭಟನಾಕಾರರು, ಕೆಲ ಕಾಲ ಹೆದ್ದಾರಿಯಲ್ಲಿ ಸಂಚಾರ ತಡೆದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ತಮಿಳು ನಾಡಿಗೆ ನೀರು ಹರಿಸುತ್ತಿರುವ ವಿಚಾರದಿಂದಾಗಿ ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿಂದ ಕಾಣೆ ಯಾಗಿದೆ. ಜನಪ್ರತಿನಿಧಿಗಳು ಸಹ ಕಾಣೆಯಾಗಿ ದ್ದಾರೆ. ಕಾಣೆಯಾಗಿರುವ ಇವರನ್ನು ಹುಡುಕಲು ನಾವು ದುರ್ಬಿನ್ ಹಾಕಿ ನೋಡಬೇಕಾಗಿದೆ ಎಂದರು.

ನೀರಿನ‌ ವಿಚಾರದಲ್ಲಿ ರಾಜ್ಯ ಮತ್ತು ತಮಿಳುನಾ ಡಿನ ನಡುವೆ ಇಷ್ಟೆಲ್ಲ ಗೊಂದಲಗಳು ಗೊಂದಲಗ ಳು ಸೃಷ್ಟಿಯಾಗಿದ್ದರೂ ಸಹ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡದೆ ಕುಳಿತು ನೋಡುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಾ.ರಂ.ಶ್ರೀನಿವಾಸಗೌಡ, ಶಾ.ಮುರಳಿ, ಮಹೇಶ್ ಗೌಡ, ನಿಜದ್ವನಿ ಗೋಂದರಾಜು, ಪಣ್ಯದಹುಂಡಿ ರಾಜು, ಗು.ಪುರು ಷೋತ್ತಮ್, ಚಾ.ವೆಂ.ರಾಜ್ ಗೋಪಾಲ್, ವೀರಭದ್ರ, ಚಾ.ಸಿ.ಸಿದ್ದರಾಜು, ರಾಚಪ್ಪ ಸೇರಿದಂತೆ ಇತರರು ಇದ್ದರು.

ಇತ್ತೀಚಿನ ಸುದ್ದಿ

Exit mobile version