5:42 PM Wednesday 28 - January 2026

ಮಾಡೆಲ್ ಉರ್ಫಿ ಜಾವೇದ್ ಬಂಧನ?: ತುಂಡುಡುಗೆ ಧರಿಸಿದ್ದಕ್ಕೆ ಬಂಧಿಸಿದ್ರಾ ಪೊಲೀಸರು!

model urfi javed
03/11/2023

ಮುಂಬೈ:  ವಿಚಿತ್ರ ಉಡುಗೊರೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ  ಟೀಕೆಗಳಿಗೊಳಗಾಗುತ್ತಿರುವ  ಮಾಡೆಲ್ ಉರ್ಫಿ ಜಾವೇದ್ ಅವರನ್ನು ಪೊಲೀಸರು ಬಂಧಿಸಿರುವ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉರ್ಫಿ ಜಾವೇದ್ ಅವರನ್ನ ಬಂಧಿಸಿರುವ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ, ಆದ್ರೆ ಈ ಬಗ್ಗೆ ವಿಡಿಯೋವೊಂದು ವೈರಲ್ ಆಗುತ್ತಿದೆ.

ತುಂಡು ಉಡುಗೆ ಧರಿಸಿದ್ದಕ್ಕಾಗಿ ಉರ್ಫಿ ಜಾವೇದ್ ಅವರನ್ನ ಬಂಧಿಸಲಾಗಿದೆ ಎಂದು ಇನ್ಸ್ ಸ್ಟಾ ಗ್ರಾಮ್ ಖಾತೆಯೊಂದರಲ್ಲಿ ವಿಡಿಯೋ ಪೋಸ್ಟ್ ಆಗಿದೆ. ಇದರಲ್ಲಿ ಪೊಲೀಸರು ಉರ್ಫಿ ಜಾವೇದ್ ಅವರನ್ನು ಬಂಧಿಸಿ ಕರೆದೊಯ್ಯುವಂತಹ ವಿಡಿಯೋವೊಂದನ್ನು ಶೇರ್ ಮಾಡಲಾಗಿದೆ.

ಪೊಲೀಸರು ತನ್ನನ್ನು ಕರೆದೊಯ್ಯಲು ಬಂದಾಗಿ ಉರ್ಫಿ ಜಾವೇದ್ , ಯಾಕೆ ನನ್ನನ್ನು ಕರೆದೊಯ್ಯುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಣ್ಣ ಬಟ್ಟೆ ಧರಿಸಿರುವ ಬಗ್ಗೆ ಪೊಲೀಸರು ಪ್ರಶ್ನಿಸಿ, ಕರೆದೊಯ್ದು ಜೀಪಿನಲ್ಲಿ ಕೂರಿಸುತ್ತಿರುವುದು ಕಂಡು ಬಂದಿದೆ.

ಇತ್ತೀಚಿನ ಸುದ್ದಿ

Exit mobile version