ದುರಂತ: ಆಕೆಗೆ ನಂಬಿದ ವ್ಯಕ್ತಿಯೇ ರಕ್ಕಸನಾದ: ಲಿವ್ಇನ್ ಸಂಗಾತಿಯನ್ನು ಪ್ರೆಶರ್ ಕುಕ್ಕರ್ ನಿಂದ ಹೊಡೆದು ಕೊಂದ ಯುವಕ

28/08/2023

24 ವರ್ಷದ ಮಹಿಳೆಯನ್ನು ಆಕೆಯ ಸಂಗಾತಿಯೇ ಪ್ರೆಶರ್ ಕುಕ್ಕರ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ವೈಷ್ಣವ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೇಗೂರು ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳ ಮೂಲದ ವೈಷ್ಣವ್ ಮತ್ತು ದೇವಾ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.

24 ವರ್ಷದ ಆರೋಪಿ ತನ್ನ ಗೆಳತಿ ತನಗೆ ಮೋಸ ಮಾಡಿದ್ದಾಳೆ ಎಂದು ಶಂಕಿಸಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version