12:50 AM Wednesday 17 - December 2025

ದುರಂತ: ಪತ್ನಿಯ ದೇಹಕ್ಕೆ ಬೆಂಕಿ ಹಚ್ಚಿ ಕತ್ತು ಸೀಳಿ ಆತ್ಮಹತ್ಯೆ ಮಾಡಿಕೊಂಡ ಪತಿ..!

19/09/2023

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೆಲಸದ ಸ್ಥಳದಲ್ಲಿಯೇ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಕೊಲ್ಲಂನ ಅಕ್ಷಯ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ನಾದಿರಾಳನ್ನು ಪತಿ ರಹೀಮ್ ಭೇಟಿ ನೀಡಲು ಬಂದಾಗ ಆಕೆ ಕೆಲಸದ ಸ್ಥಳದಲ್ಲಿದ್ದಳು.

ಆತ ಕಚೇರಿಯ ಒಳಗೆ ಪ್ರವೇಶಿಸಿ, ನಾದಿರಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಅವನು ಹೊರಗಡೆ ಓಡಿ ತನ್ನ ಕತ್ತು ಸೀಳಿಕೊಂಡು ಹತ್ತಿರ ಇದ್ದ ಬಾವಿಗೆ ಹಾರಿ ಸಾವನ್ನಪ್ಪಿದ್ದಾನೆ.

ಸೋಮವಾರ ಈ ಘಟನೆ ನಡೆದಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಘಟನೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version