ಕೇವಲ ತಲೆ ಸುತ್ತು ಬಂದು 11 ಮಂದಿ ಸಾವು

corona
21/04/2021

ನಾಸಿಕ್: ಕೊರೊನಾ ಭೀಕರತೆ ಇಡೀ ದೇಶದಲ್ಲಿ ಭೀತಿಯನ್ನುಂಟು ಮಾಡಿರುವ ಬೆನ್ನಲ್ಲೇ ಮಹಾರಾಷ್ಟ್ರದ ನಾಸಿಕ್ ನಲ್ಲಿ 11 ಮಂದಿ ಕೇವಲ ತಲೆ ಸುತ್ತು ಬಂದು ಸಾವಿಗೀಡಾಗಿರುವ ಘಟನೆ ನಡೆದಿದೆ.

ಇಂದು ತಲೆಸುತ್ತು ಬಂದು ಬರೋಬ್ಬರಿ 11 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಾಸಿಕ್ ಪಟ್ಟಣದಲ್ಲಿ ನಡೆದಿದೆ. ಕೊರೊನಾ ಸಂಬಂಧಿತ ಸಾವುಗಳು ಇಲ್ಲಿ ಹೆಚ್ಚಾಗಿವೆ. ಪ್ರತಿದಿನ 2 ಸಾವಿರ ಕೇಸ್ ವರದಿಯಾಗುತ್ತಿವೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ 9 ಮಂದಿ ಒಂದೇ ದಿನ ಪ್ರಾಣ ಕಳೆದುಕೊಂಡಿದ್ದರು.

ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳ ಪಾಡು ಕೇಳುವವರಿಲ್ಲದಂತಾಗಿದೆ. ಯಾವುದೇ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ.

ಇತ್ತೀಚಿನ ಸುದ್ದಿ

Exit mobile version