4:47 AM Thursday 16 - October 2025

ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್: ಕಾಲೇಜಿನ ಮಾಜಿ ಪ್ರಾಂಶುಪಾಲರಿಗೆ ಜಾಮೀನು ನಿರಾಕರಣೆ

28/09/2024

ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್ ಗೆ ಸಿಬಿಐ ನಿಯೋಜಿತ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಘೋಷ್ ವಿರುದ್ಧದ ಆರೋಪಗಳು ತೀವ್ರ ಗಂಭೀರ ಸ್ವರೂಪದ್ದಾಗಿವೆ. ಇವು ಸಾಬೀತಾದರೆ ಮರಣದಂಡನೆಗೆ ಅರ್ಹ ಎಂದು ಅಭಿಪ್ರಾಯಪಟ್ಟಿದೆ.

ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪುರಾವೆಗಳ ನಾಶ ಮತ್ತು ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಘೋಷ್ ಹಾಗೂ ತಾಳಾ ಪೊಲೀಸ್ ಠಾಣಾಧಿಕಾರಿ ಅಭಿಜಿತ್ ಮಂಡಲ್ ಅವರನ್ನು ಸಿಬಿಐ ಬಂಧಿಸಿತ್ತು.

ಈ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆ ನಡೆಸುತ್ತಿರುವ ತನಿಖೆಗಳು ಭರದಿಂದ ಸಾಗುತ್ತಿವೆ ಎನ್ನುವುದು ಕೇಸ್ ಡೈರಿಯಿಂದ ತಿಳಿಯುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಹೆಚ್ಚುವರಿ ಮುಖ್ಯ ಜ್ಯುಡೀಷಿಯನ್ ಮ್ಯಾಜಿಸ್ಟ್ರೇಟ್ ಎಸ್ ಡೇ, ಘೋಷ್ ಗೆ ಜಾಮೀನು ನೀಡಲು ನಿರಾಕರಿಸಿ, ಘೋಷ್ ವಿರುದ್ಧದ ಆರೋಪಗಳ ತೀವ್ರತೆ ಹಾಗೂ ಸ್ವರೂಪ ಗಂಭೀರ ಹಾಗೂ ಇವು ಸಾಬೀತಾದರೆ ವಿರಳಾತಿವಿರಳ ಪ್ರಕರಣದಲ್ಲಿ ನೀಡುವ ಮರಣದಂಡನೆಗೆ ಅರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಅನ್ಯಾಯ ಎನಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version