11:16 PM Tuesday 14 - October 2025

ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್

pune
06/08/2021

ಪುಣೆ: ಕಿಕ್ಕಿರಿದು ವಾಹನ ಸಂಚಾರ ಇರುವ ರಸ್ತೆಯಲ್ಲಿ ಯುವತಿಯೋರ್ವಳು ಕಂಠಮಟ್ಟ ಮದ್ಯ ಸೇವಿಸಿ ಮಲಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಈಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಡಿದು ಚಿತ್ತಾಗಿ ವಾಲುತ್ತಾ ಬಂದ ಯುವತಿ ರಸ್ತೆಯಲ್ಲಿ ಮಲಗಿದ್ದು, ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈಕೆಯ ಉಪಟಳದಿಂದ ವಾಹನ ಸವಾರರು ತೀವ್ರವಾಗಿ ತೊಂದರೆಗೀಡಾಗಿದ್ದಾರೆ. ಕೆಲವರು ಯುವತಿಯನ್ನು ತಪ್ಪಿಸಿಕೊಂಡು ರಸ್ತೆಯಲ್ಲಿ ವಾಹನ ಚಲಿಸಲು ಮುಂದಾದರೂ ಸಾಧ್ಯವಾಗಲಿಲ್ಲ.

ಸಾಮಾನ್ಯವಾಗಿ ಕುಡಿದು ರಸ್ತೆಯಲ್ಲಿ ಮಲಗುವ ಸರದಿಯಲ್ಲಿ ಪುರುಷರದ್ದೇ ಮೇಲುಗೈ ಇರುತ್ತದೆ. ಆದರೆ, ಒಬ್ಬಳು ಯುವತಿ ರಸ್ತೆಯಲ್ಲಿ ಕುಡಿದು ಮಲಗಿರುವುದು ಎಲ್ಲರಿಗೂ ಅಚ್ಚರಿಯ ವಿಚಾರವಾಗಿತ್ತು. ಈ ರೀತಿಯಾದರೆ, ಸಮಾಜ ಎಲ್ಲಿ ಹೋಗಿ ಮುಟ್ಟುತ್ತದೆ ಎಂದು ಹಿರಿಯರು ತಲೆ ಚಚ್ಚಿಕೊಂಡರೆ, ಇನ್ನು ಕೆಲವರು ಯುವತಿಯ ವರ್ತನೆಯನ್ನು ನೋಡಿಕೊಂಡು ಬಿಟ್ಟಿ ಮಜಾ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು.

ಇನ್ನೂ ಯುವತಿ ಮಾಡಿದ ಕೆಲಸದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಯುವತಿ ಕುಡಿದು ರಸ್ತೆಯಲ್ಲಿ ಮಲಗಿರುವುದು ಕಂಡು ಬಂದಿದೆ. ತಕ್ಷಣವೇ ಯುವತಿಯನ್ನು ಸ್ಥಳದಿಂದ ಕರೆದೊಯ್ದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಮಾಡಿಕೊಂಡಿರುವ ಯುವಕರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ವಿಡಿಯೋ ಕಾಲ್ ನಲ್ಲೇ ಕೊಲೆಗೆ ಟ್ರೈನಿಂಗ್ ನೀಡಿದ ಪ್ರಿಯಕರ: ಅಮ್ಮನನ್ನೇ ಕೊಂದ ಬಾಲಕಿ

403 ಕ್ಷೇತ್ರಗಳಲ್ಲಿಯೂ ASP ಸ್ಪರ್ಧೆ | ಮಾಯಾವತಿಗೆ ಅಸುರಕ್ಷಿತ ಭಾವನೆ ಇದೆ- ಚಂದ್ರಶೇಖರ್ ಆಜಾದ್

ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?

“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ

ಎಲ್ಲ ವಿದ್ಯಾರ್ಥಿಗಳು ಪಾಸ್, ಶಿಕ್ಷಣ ಸಚಿವರು ಫೇಲ್! | ರಿ ಎಕ್ಸಾಮ್ ಬರೀತಾರಾ ಸುರೇಶ್ ಕುಮಾರ್?

“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!”

ಇತ್ತೀಚಿನ ಸುದ್ದಿ

Exit mobile version