12:26 PM Wednesday 10 - December 2025

ಕುಮಾರ್ ವಿಶ್ವಾಸ್ ಭದ್ರತಾ ಸಿಬ್ಬಂದಿ ಮತ್ತು ವ್ಯಕ್ತಿಯೋರ್ವನ ಮಧ್ಯೆ ಗಲಾಟೆ: ಠಾಣೆ ಮೆಟ್ಟಿಲೇರಿದ ‘ಫೈಟಿಂಗ್’ ಹಿಂದಿನ ಸತ್ಯಾಸತ್ಯತೆ ಏನು..?

09/11/2023

ಕವಿ ಮತ್ತು ಮಾಜಿ ರಾಜಕಾರಣಿ ಕುಮಾರ್ ವಿಶ್ವಾಸ್ ಅವರ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿ ವ್ಯಕ್ತಿಯೊಬ್ಬರೊಂದಿಗೆ ಗಲಾಟೆ ಮಾಡಿದ ಘಟನೆ ನಡೆದಿದೆ. ಕುಮಾರ್ ವಿಶ್ವಾಸ್ ಅವರು ಅಲಿಗಢಕ್ಕೆ ತೆರಳುತ್ತಿದ್ದಾಗ ಹಿಂಡನ್ ನದಿಯ ಬಳಿ ಈ ಘಟನೆ ನಡೆದಿದೆ.

ವಾಹನಗಳ ಓವರ್ ಟೇಕ್ ಸಮಸ್ಯೆಯಿಂದಾಗಿ ವಾಗ್ವಾದ ನಡೆದಿದ್ದು ಇದೇ ವೇಳೆ ಗಲಾಟೆ ನಡೆದು ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಕುಮಾರ್ ವಿಶ್ವಾಸ್ ಅವರ ಬೆಂಗಾವಲು ವಾಹನದ ಮೇಲೆ ಈ ವ್ಯಕ್ತಿ ದಾಳಿ ಮಾಡಿದ್ದ ಎಂದು ಹೇಳಲಾಗಿದೆ.
ಕುಮಾರ್ ವಿಶ್ವಾಸ್ ಅವರು ಎಕ್ಸ್ ನಲ್ಲಿ ತಮ್ಮ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.

“ಇಂದು, ನಾನು ಅಲಿಗಢಕ್ಕೆ ಹೋಗುತ್ತಿದ್ದಾಗ, ಕಾರು ಚಾಲಕನೋರ್ವ ನನ್ನೊಂದಿಗೆ ಬರುತ್ತಿದ್ದ ಭದ್ರತಾ ಸಿಬ್ಬಂದಿಯ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದನು” ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ.

ವ್ಯಕ್ತಿಯನ್ನು ಪ್ರಶ್ನಿಸಿದಾಗ, ಆ ವ್ಯಕ್ತಿ ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ ಮೇಲೆ ಮಾತ್ರವಲ್ಲದೆ ಕೇಂದ್ರ ಭದ್ರತಾ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಲಾಗಿದೆ ಮತ್ತು ದಾಳಿಗೆ ಕಾರಣ ತಿಳಿದಿಲ್ಲ” ಎಂದು ಅವರು ಹೇಳಿದರು.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ ವ್ಯಕ್ತಿಯೊಬ್ಬನ ಮೂಗಿನಿಂದ ಅತಿಯಾದ ರಕ್ತಸ್ರಾವ ಮತ್ತು ಕೈಯಲ್ಲಿ ಗಾಯಗಳಾಗಿರುವುದನ್ನು ತೋರಿಸುತ್ತದೆ.

ಕುಮಾರ್ ವಿಶ್ವಾಸ್ ಮತ್ತು ವ್ಯಕ್ತಿಯಿಂದ ಪೊಲೀಸರಿಗೆ ದೂರುಗಳು ಬಂದಿವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಇಂದಿರಾಪುರಂ) ಸ್ವತಂತ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
“ನಾವು ಕುಮಾರ್ ವಿಶ್ವಾಸ್ ಅವರಿಂದ ಆನ್ ಲೈನ್ ಮೂಲಕ ಮತ್ತು ಇಂದಿರಾಪುರಂ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮೂಲಕ ದೂರು ಸ್ವೀಕರಿಸಿದ್ದೇವೆ” ಎಂದು ಸ್ವತಂತ್ರ ಕುಮಾರ್ ಸಿಂಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.


ಇತ್ತೀಚಿನ ಸುದ್ದಿ

Exit mobile version