ಲೋಕಾಯುಕ್ತ ರೇಡ್! : ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್
30/10/2023
ಚಾಮರಾಜನಗರ: ಇಂದು ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದು ಕೊಳ್ಳೇಗಾಲದ ಫಾರಂ ಹೌಸ್, ಅಧಿಕಾರಿ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿ ಅಕ್ರಮ ಸಂಪತ್ತು ಹುಡುಕಾಟ ನಡೆಸಿದ್ದಾರೆ.
ಬೆಂಗಳೂರಿನ ಕಾರ್ಮಿಕ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಅವರಿಗೆ ಸೇರಿಸ ಫಾರಂ ಹೌಸ್, ಮಾವನ ಮನೆ, ಸಂಬಂಧಿಕರ ಮನೆ ಸೇರಿ 9 ಕಡೆ ಈ ದಾಳಿ ನಡೆಸಲಾಗಿದೆ.
ಕೊಳ್ಳೇಗಾಲದ ಉಪ್ಪಾರ ಮೋಳೆಯಲ್ಲಿರುವ ಫಾರಂ ಹೌಸ್, ಕೊಳ್ಳೇಗಾಲದ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ಕಡತಗಳು, ಆಸ್ತಿಪತ್ರಗಳನ್ನು ಹುಡುಕಾಡುತ್ತಿದ್ದು ಎರಡು ಕಾರಿನಲ್ಲಿ ಲೋಕಾಯುಕ್ತ ಸಿಬ್ಬಂದಿ ಬಂದಿದ್ದು ಆರಕ್ಕೂ ಹೆಚ್ಚು ಸಿಬ್ಬಂದಿಯಿಂದ ದಾಖಲೆಗಳ ಪರಿಶೀಲನೆ ನಡೆದಿದೆ.

























