ಮೂತ್ರ ಆಯಿತು, ಇದೀಗ ಪಾದ ನೆಕ್ಕುವಂತೆ ಯುವಕನಿಗೆ ಟಾರ್ಚರ್: ಮಧ್ಯಪ್ರದೇಶದಲ್ಲಿ ಬಯಲಾಯಿತು ಮತ್ತೊಂದು ನೀಚ ಕೃತ್ಯ..!

08/07/2023

ಮಧ್ಯಪ್ರದೇಶ ಮತ್ತೊಮ್ಮೆ ಸುದ್ದಿಯಲ್ಲಿದೆ. ಮೊನ್ನೆಯಷ್ಟೇ ಆದಿವಾಸಿ ಸಮುದಾಯದ ವ್ಯಕ್ತಿಯ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿತ್ತು.  ಇದರ ಬೆನ್ನಲ್ಲೇ ಆದಿವಾಸಿ ಯುವಕರಿಗೆ ಕಿರುಕುಳ ನೀಡಿ ಇಬ್ಬರು ಯುವಕರಿಗೆ ಮಲ ತಿನ್ನಿಸಿ, ಚಪ್ಪಲಿಯ ಮಾಲೆ ಹಾಕಿ ಊರೆಲ್ಲ ಮೆರವಣಿಗೆ ಮಾಡಿರುವ ಹೇಯ ಕೃತ್ಯವೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಈ ಮಧ್ಯೆ ಯುವಕನೊಬ್ಬನಿಗೆ ತನ್ನ ಪಾದಗಳನ್ನು ನೆಕ್ಕುವಂತೆ ವ್ಯಕ್ತಿಯೊಬ್ಬ ಒತ್ತಾಯ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಗ್ವಾಲಿಯರ್​ ನಡೆದಿದೆ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಇವರನ್ನು ಗ್ವಾಲಿಯರ್ ಜಿಲ್ಲೆಯ ದಾಬ್ರಾ ಪಟ್ಟಣದ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಯುವಕ ಮತ್ತು ಆರೋಪಿಗಳು ಒಂದೇ ಊರಿನವರು ಎಂದು ಹೇಳಲಾಗಿದೆ. ಕಾರಿನಲ್ಲಿ ಕೂರಿಸಿಕೊಂಡು ಯುವಕನಿಗೆ ಪದೇ ಪದೇ ಆರೋಪಿಗಳು ಕಪಾಳಮೋಕ್ಷ ಮಾಡುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ಜತೆಗೆ ‘ಗೋಲು ಗುರ್ಜರ್ ಬಾಪ್ ಹೈ’ (ಗೋಲು ಗುರ್ಜರ್ ತಂದೆ) ಎಂದು ಹೇಳುವಂತೆ ಹಿಂಸೆ ನೀಡುತ್ತಿರುವುದು ಮತ್ತು ಆ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಕೂಡ ವೀಡಿಯೊದಲ್ಲಿ ರೆಕಾರ್ಡ್​ ಆಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಬ್ರಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ವಿವೇಕ್ ಕುಮಾರ್ ಶರ್ಮಾ ಮಾತನಾಡಿ, ವಾಹನದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊ ಕ್ಲಿಪ್​ನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಯುವಕನ ಕುಟುಂಬದವರ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಅಪಹರಣ ಮತ್ತು ಥಳಿಸಿದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.

ಯುವಕ ಮತ್ತು ಆರೋಪಿಗಳು ಗ್ವಾಲಿಯರ್ ಜಿಲ್ಲೆಯ ದಾಬ್ರಾ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಮಾತನಾಡಿದ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಅಂದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 (ಒಬ್ಬ ವ್ಯಕ್ತಿಯನ್ನು ತಪ್ಪಾಗಿ ನಿರ್ಬಂಧಿಸುವುದು), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಸ್ವಯಂಪ್ರೇರಿತವಾಗಿ ಆಯುಧ ಅಥವಾ ವಸ್ತುವಿನಿಂದ ಗಾಯಗೊಳಿಸುವುದು), 307 (ಕೊಲೆಗೆ ಯತ್ನ) ಮತ್ತು 34 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version