ನಿಮ್ಮ ಮದುವೆ ಯಾವಾಗ..? ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಿದ ಮೆಕ್ಯಾನಿಕ್..!

09/07/2023

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಮೆಕ್ಯಾನಿಕ್ ಮಾರುಕಟ್ಟೆಗೆ ಭೇಟಿ ನೀಡಿದರು. ಇದೇ ವೇಳೆ ಮೆಕ್ಯಾನಿಕ್‌ ಗಳೊಂದಿಗೆ ಸಂವಾದ ನಡೆಸಿರುವ ವಿಡಿಯೋವನ್ನು ರಾಹುಲ್‌ ಗಾಂಧಿ ಅವರ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ.

ಇದೇ ವೇಳೆ ಅವರು ಬೈಕ್‌ ನ ಸರ್ವಿಸ್‌ ಮಾಡಿದ ರಾಹುಲ್ ಗಾಂಧಿ ಮೆಕ್ಯಾನಿಕ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದ್ದಾರೆ.
ಈ ವೇಳೆ ಮೆಕ್ಯಾನಿಕ್ ಒಬ್ಬರು ನಿಮ್ಮ ಮದುವೆ ಯಾವಾಗ ಎಂದು ರಾಹುಲ್ ಗಾಂಧಿ ಬಳಿ ಕೇಳಿದ್ದು, ‘ಶೀಘ್ರದಲ್ಲಿಯೇ ಆಗಲಿದೆʼ ಎಂದು ರಾಹುಲ್‌ ಮುಗುಳ್ನಗುತ್ತಾ ಉತ್ತರಿಸಿದ್ದಾರೆ.

ಮೆಕ್ಯಾನಿಕ್‌ ಸಂಸಾರದ ಕುರಿತು ರಾಹುಲ್‌ ಪ್ರಶ್ನಿಸಿದಾಗ, ‘ತಿಂಗಳಿಗೆ 14-15 ಸಾವಿರ ಸಂಪಾದಿಸುವ ನಾವು ಈ ಮೊತ್ತದಲ್ಲಿ ಸಂಸಾರ ನಡೆಸುವುದು ಹೇಗೆ..? ಎಂದು ಮೆಕ್ಯಾನಿಕ್ ಪ್ರಶ್ನಿಸಿದ್ದಾರೆ.

ರಾಹುಲ್‌‌ ಬೈಕ್‌ ಕುರಿತು ಮೆಕ್ಯಾನಿಕ್ ಕೇಳಿದ್ದು, ‘ನನ್ನ ಬಳಿ ಕೆಟಿಎಂ 390 ಇದೆ. ಆದರೆ ಸೆಕ್ಯೂರಿಟಿ ಕಾರಣಕ್ಕಾಗಿ ಅದರಲ್ಲಿ ಓಡಾಡಲು ಬಿಡುತ್ತಿಲ್ಲʼ ಎಂಬ ರಾಹುಲ್ ನೋವು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಲಿಂಕ್‌ ಹಂಚಿಕೊಂಡಿರುವ ರಾಹುಲ್‌ ಗಾಂಧಿ, ʼಭಾರತದ ಆಟೋಮೊಬೈಲ್ ಉದ್ಯಮವನ್ನು ಬಲಪಡಿಸಲು, ಭಾರತದ ಮೆಕ್ಯಾನಿಕ್‌ಗಳನ್ನು ಸಶಕ್ತಗೊಳಿಸುವ ಅವಶ್ಯಕತೆಯಿದೆ. ಎಂದು ಟ್ವೀಟ್‌ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version