ಹೀಗೂ ಉಂಟು: ಟೊಮ್ಯಾಟೊಗೆ ಬಂಗಾರದ ಬೆಲೆ: ಟೊಮ್ಯಾಟೊ ಕಾಯಲು ಬೌನ್ಸರ್ಸ್ ನೇಮಿಸಿದ ವ್ಯಾಪಾರಿ..!

09/07/2023

ಚಿನ್ನ, ತೈಲ ಬೆಲೆ ಏರಿಕೆಯಾದಾಗ ಜನರು ಸುಸ್ತು ಆಗಿದ್ದು ನಿಜ. ಈಗ ಜನರು ಟೊಮ್ಯಾಟೊ ಬೆಲೆ ಕೇಳಿ ಕಂಗಲಾಗಿದ್ದಾರೆ. ಅತ್ತ ವ್ಯಾಪಾರಿಗಳಿಗೆ ಖುಷಿ ನೀಡಿದರೂ ಟೊಮ್ಯಾಟೊ ಮೇಲೆ ಕಳ್ಳರ ಕಣ್ಣು ಇದೆ ಎಂದು ಗೊತ್ತಾದ ಕೂಡಲೇ ಟೊಮ್ಯಾಟೊಗೆ ಹೇಗಪ್ಪ ಕಾವಲು ನೀಡೋದು ಎಂಬ ಚಿಂತೆ ಶುರುವಾಗಿದೆಯಂತೆ.

ಹೌದು. ಇದು ತಮಾಷೆ ಅಲ್ಲ ಕಣ್ರೀ. ಸದ್ಯ ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಬಂಗಾರ ಬಲೆ ಬಂದಿದೆ. ಇದನ್ನು ಕಾಯಲೆಂದೇ ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ಮಾರಾಟಗಾರರೊಬ್ಬರು ಬೌನ್ಸರ್ಸ್ ಗಳನ್ನು ನೇಮಿಸಿಕೊಂಡಿದ್ದಾರೆ.
ಟೊಮ್ಯಾಟೊ ಬೆಲೆ ಹೆಚ್ಚಾಗುತ್ತಿದ್ದಂತೆ ಖರೀದಿಸುವ ಬದಲು ಜನರು ಕಳ್ಳತನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತೊಂದರೆ ನೀಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನನ್ನ ಅಂಗಡಿಯಲ್ಲಿ ಟೊಮ್ಯಾಟೋಗಳಿವೆ. ನಾನು ಗ್ರಾಹಕರೊಂದಿಗೆ ಯಾವುದೇ ವಾದ ಅಥವಾ ಜಗಳ ಮಾಡಲು ಬಯಸುವುದಿಲ್ಲ. ಟೊಮ್ಯಾಟೋ 160 ರೂ. ಕೆಜಿ ಗೆ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ ಎಂದು ತರಕಾರಿ ಮಾರಾಟಗಾರ ಅಜಯ್ ಫೌಜಿ ಪಿಟಿಐಗೆ ತಿಳಿಸಿದ್ದಾರೆ.

ಯಾವಾಗ ಟೊಮೆಟೋ ಬೆಲೆ ಕೆ.ಜಿ.ಗೆ 150 ರೂ. ದಾಟಿತೋ ಕಳ್ಳರು 3 ಲಕ್ಷ ಮೌಲ್ಯದ 90 ಟೊಮೆಟೋ ಬಾಕ್ಸ್​ಗಳನ್ನು ತೆಗೆದುಕೊಂಡು ಹೋಗಿರುವ ಘಟನೆ ಕೂಡಾ ಬೆಳಕಿಗೆ ಬಂದಿದೆ‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version