8:59 AM Wednesday 28 - January 2026

ಹಾಸಿಗೆಯಲ್ಲಿ ಶೌಚ ಮಾಡಿತೆಂದು ತಾಯಿಯಿಲ್ಲದ  ಮಗುವನ್ನು ಹೊಡೆದು ಕೊಂದ ಮಹಿಳೆ!

10/02/2021

ಲಕ್ನೋ:  ಮಗು ಹಾಸಿಗೆಯಲ್ಲಿ ಶೌಚ ಮಾಡಿತು ಎಂದು 5 ವರ್ಷದ ಮಗುವನ್ನು ಮಗುವಿನ ದೊಡ್ಡಮ್ಮ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಫರೂಖಾಬಾದ್ ನಲ್ಲಿ ನಡೆದಿದ್ದು, ಈ ಕೃತ್ಯಕ್ಕೆ ತಂದೆ ಕೂಡ ಸಹಾಯ ಮಾಡಿದ್ದಾನೆ.

5ವರ್ಷದ ಯಶ್ ಪ್ರತಾಪ್ ಕೊಲೆಯಾದ ಮಗುವಾಗಿದ್ದಾನೆ. ತಾಯಿಯನ್ನು ಕಳೆದುಕೊಂಡಿದ್ದ ಯಶ್ ನನ್ನು ಆತನ ತಂದೆ ರಾಮ್ ಬಹದ್ದೂರ್, ತನ್ನ ಸಹೋದರನ ಮನೆಯಲ್ಲಿ ಬಿಟ್ಟಿದ್ದಾನೆ. ಹೀಗಾಗಿ ಫರೂಖಾಬಾದ್ ನಗರದ ನ್ಯೂ ಫೌಜಿ ಕಾಲೋನಿಯಲ್ಲಿರುವ ದೊಡ್ಡಪ್ಪ-ದೊಡ್ಡಮ್ಮನ ಮನೆಯಲ್ಲಿ ಮಗು ವಾಸವಿತ್ತು.

ಪ್ರತಿ ದಿನ ಮಗು ಯಶ್ ಹಾಸಿಗೆಯಲ್ಲಿ ಶೌಚ ಮಾಡುತ್ತಿದ್ದ. ದೊಡ್ಡಮ್ಮನಿಗೆ ಬೆಳಗ್ಗೆ ಎದ್ದು ಮಗುವಿನ ಶೌಚವನ್ನು ತೆಗೆಯವುದು ಹಿಂಸೆಯಾಗಿತ್ತು. ಫೆ.6ರಂದು ಕೂಡ  ಮಗು ಹಾಸಿಗೆಯಲ್ಲಿ ಶೌಚ ಮಾಡಿದೆ. ಇದರಿಂದ ಕೋಪಗೊಂಡ ದೊಡ್ಡಮ್ಮ ಕೋಪಗೊಂಡು ಮಗುವಿಗೆ ಮನಸೋಇಚ್ಛೆ ಥಳಿಸಿದ್ದಾಳೆ. ಇದರಿಂದಾಗಿ ಮಗು ಸಾವಿಗೀಡಾಗಿದೆ.

ಮಗು ಸಾವನ್ನಪ್ಪಿದ ಮೇಲೆ ಈ ವಿಚಾರವನ್ನು ತನ್ನ ತಂದೆಗೆ ಆಕೆ ತಿಳಿಸಿದ್ದಾಳೆ.  ತಂದೆ ಮಗುವಿನ ಶವವನ್ನು ಬ್ಯಾಗಿನಲ್ಲಿ ತುಂಬಿಸಿಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾನೆ. ಇದಾದ ಬಳಿಕ ಮಗು ನಾಪತ್ತೆಯಾಗಿದೆ ಎಂದು ದೊಡ್ಡಮ್ಮನೇ ದೂರು ದಾಖಲಿಸಿದ್ದಾಳೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ದೊಡ್ಡಮ್ಮನ ವರ್ತನೆಗಳಿಂದ ಅನುಮಾನ ಬಂದಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಕಕ್ಕಿದ್ದಾಳೆ. ಆಕೆಯ ಹೇಳಿಕೆಯನ್ನು ಆಧರಿಸಿ ಆಕೆ ಹಾಗೂ ಆಕೆಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version