ದೇವಿರಮ್ಮ ಬೆಟ್ಟದಲ್ಲಿ ತಪ್ಪಿದ ಭಾರಿ ಅನಾಹುತ: ಕಾಂಕ್ರೀಟ್–ಕಬ್ಬಿಣದ ರಾಡ್ ಗಳು ಏಕಾಏಕಿ ಉರುಳಿ 25ಕ್ಕೂ ಹೆಚ್ಚು ಭಕ್ತರಿಗೆ ಗಾಯ!

deviramabetta
09/11/2026

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಸಮುದ್ರ ಮಟ್ಟದಿಂದ ಸುಮಾರು 6,000 ಅಡಿ ಎತ್ತರದ ದೇವೀರಮ್ಮನ ಬೆಟ್ಟದಲ್ಲಿ ಏಕಾಏಕಿ ಭಾರಿ ಅವಘಡ ಸಂಭವಿಸಿದೆ. ವರ್ಷಕ್ಕೊಮ್ಮೆ ನಡೆಯುವ ದೇವೀರಮ್ಮನ ದರ್ಶನಕ್ಕಾಗಿ ಸಾವಿರಾರು ಭಕ್ತರು ಸಾಲು ಗಟ್ಟಿ ನಿಂತಿದ್ದ ವೇಳೆಯಲ್ಲೇ ಈ ದುರಂತ ಸಂಭವಿಸಿದ್ದು, ಎದೆ ಝಲ್ ಎನ್ನಿಸುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿವೆ.

ಘಟನೆಯ ವಿವರ: ನಡುಗುವ ಕಾಲುಗಳಲ್ಲಿ ಕಡಿದಾದ ಇಳಿಜಾರಿನಲ್ಲಿ ನಿಲ್ಲುವುದಕ್ಕೂ ಕಷ್ಟಸಾಧ್ಯವಾಗುವ ಬೆಟ್ಟದ ಹಾದಿಯಲ್ಲಿ, ಭಕ್ತರ ರಕ್ಷಣೆಗೆ ಮತ್ತು ಆಸರೆಗೆಂದು ಹೊಡೆಯಲಾಗಿದ್ದ ಸಿಮೆಂಟ್ ಕಾಂಕ್ರೀಟ್ ಹಾಗೂ ಕಬ್ಬಿಣದ ಕಂಬಿಗಳು ಏಕಾಏಕಿ ಕಿತ್ತುಬಂದಿವೆ. ಬೆಟ್ಟದ ತುದಿಯಲ್ಲಿ 50ಕ್ಕೂ ಹೆಚ್ಚು ಕಬ್ಬಿಣದ ರಾಡ್ ಗಳು ಸಿಮೆಂಟ್ ಕಾಂಕ್ರೀಟ್ ಸಮೇತ ಕೆಳಕ್ಕೆ ಉರುಳಿ ಬಿದ್ದಿದ್ದು, ಕಂಬಿ ಹಿಡಿದು ನಿಂತಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ.

ಇಳಿಜಾರಿನಲ್ಲಿ ಏಕಾಏಕಿ ಕಬ್ಬಿಣದ ಸರಳುಗಳು ಭಕ್ತರ ಮೇಲೆ ಉರುಳಿದ್ದರಿಂದ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಕೆಲವರಿಗೆ ತೀವ್ರ ಗಾಯಗಳಾಗಿವೆ. ಘಟನೆಯ ತೀವ್ರತೆಗೆ ಲಕ್ಷಾಂತರ ಭಕ್ತರಿದ್ದ ಸ್ಥಳದಲ್ಲಿ ಭಾರಿ ಅನಾಹುತ ಸಂಭವಿಸಬೇಕಿತ್ತು. ಆದರೆ ದೇವೀರಮ್ಮನ ಪವಾಡದಿಂದ ಭಾರಿ ಪ್ರಮಾಣದ ದುರಂತವೊಂದು ಜಸ್ಟ್ ಮಿಸ್ ಆಗಿದೆ.

ಸ್ಥಳಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭೇಟಿ: ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ, ಪೊಲೀಸ್ ಪಡೆ ಹಾಗೂ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version