8:13 AM Saturday 25 - October 2025

ಬ್ಲೌಸ್’‌ನ ಒಳಭಾಗದಲ್ಲಿ ಚಿನ್ನ ಸಾಗಾಟ: 1 ಕೆ.ಜಿ. 133 ಗ್ರಾಂ ಚಿನ್ನ ಸೀಜ್‌

airport
21/10/2023

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ಪ್ರಕರಣಗಳಲ್ಲಿ 67 ಲಕ್ಷ ರೂ. ಮೌಲ್ಯದ 1 ಕೆಜಿ 133 ಗ್ರಾಂ ಚಿನ್ನ ಸೀಜ್‌ ಮಾಡಿದ್ದಾರೆ.

ಭಾರತ ಮೂಲದ ಮಹಿಳೆ ಕೌಲಾಲಂಪುರ್‌ ನಿಂದ ಬೆಂಗಳೂರಿಗೆ ಬಂದಿದ್ದಳು. ಈಕೆ ತನ್ನ ಬ್ಲೌಸ್ ‌ನ ಒಳಭಾಗದಲ್ಲಿ 300 ಗ್ರಾಂ ನಷ್ಟು ಪೇಸ್ಟ್‌ ರೂಪದ ಚಿನ್ನವನ್ನ ಇಟ್ಟುಕೊಂಡಿದ್ದಳು. ಇನ್ನೂ ಮಲೇಷಿಯಾ ಮೂಲದ ಮಹಿಳೆ ಸಹ 34 ಲಕ್ಷ ರೂ. ಮೌಲ್ಯದ 578 ಗ್ರಾಂ ಚಿನ್ನ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ.

ಮತ್ತೊಂದು ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಯೊರ್ವ ಕುವೈತ್‌ನಿಂದ ಬಂದಿದ್ದು, ಡ್ರೈಫ್ರೂಟ್ಸ್‌ ಪಾಕೆಟ್‌ನಲ್ಲಿ ಸಣ್ಣ ಸಣ್ಣ ಚೂರುಗಳ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, 15 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನ ಸೀಜ್‌ ಮಾಡಿದ್ದಾರೆ. ಜೊತೆಗೆ 1 ಐಪೋನ್ ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version