ಭಯಾನಕ: ಕೇಂದ್ರ ಸಚಿವರ ಮನೆ ಒಳಗಡೆ ವ್ಯಕ್ತಿಯ ಬರ್ಬರ ಹತ್ಯೆ

01/09/2023

ಕೇಂದ್ರ ಸಚಿವ ಕೌಶಲ್ ಕಿಶೋರ್ ಎಂಬುವವರ ಹೊಸ ಮನೆಯ ಒಳಗಡೆ ಯುವಕನನ್ನು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಪೊಲೀಸರು ಸಚಿವರ ಮಗನ ಪಿಸ್ತೂಲ್ ಅನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಕೊಲೆಯಾದ ವಿಕಾಸ್ ಶ್ರೀವಾಸ್ತವ ಎಂಬಾತ ಸಚಿವ ಕಿಶೋರ್ ನ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ‌.

ಇತ್ತೀಚಿನ ಸುದ್ದಿ

Exit mobile version