ಡಿಕೆಶಿ ನೋಡಲು ಬಂದ ಕೈ ಮುಖಂಡನ ಜೇಬಿಗೆ ಕತ್ತರಿ ಹಾಕಿ ಸಿಕ್ಕಿಬಿದ್ಧ ವ್ಯಕ್ತಿ!

26/08/2023
ಚಾಮರಾಜನಗರ: ಇಂದು ಕಾರ್ಖಾನೆ ಭೂಮಿಪೂಜೆಗಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮರಾಜನಗರಕ್ಕೆ ಆಗಮಿಸಿದ್ದರು. ನೆಚ್ಚಿನ ನಾಯಕನನ್ನು ಕಾಣಲು ಕೈ ಕಾರ್ಯಕರ್ತರು, ಮುಖಂಡರ ದಂಡೇ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್ ನಲ್ಲಿ ಸೇರಿತ್ತು.
ಈ ವೇಳೆ, ಕಳ್ಳನೋರ್ವ ಕೈಚಳಕ ತೋರಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಎಂಬವರ ಜೇಬಿನಿಂದ 30 ಸಾವಿರ ರೂ. ಎಗರಿಸುವಾಗ ಗೌಡಹಳ್ಳಿ ಮಹೇಶ್ ಎಂಬವರು ಗಮನಿಸಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.
ಕ್ಷಣ ಮಾತ್ರದಲ್ಲಿ 30 ಸಾವಿರ ಎಗರಿಸಿ ಮಾಯವಾಗುತ್ತಿದ್ದ ಖದೀಮ ಯುವಕ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಚುನಾವಣೆ ಪ್ರಚಾರಕ್ಕೆ ಈ ಹಿಂದೆ ಡಿಕೆಶಿ ಅವರು ಭೇಟಿ ಕೊಟ್ಟಿದ್ದ ವೇಳೆ ಶಾಸಕರ ಪುತ್ರನ ಜೇಬಿಗೂ ಕತ್ತರಿ ಬಿದ್ದು 20 ಸಾವಿರ ಕಳೆದುಕೊಂಡಿದ್ದರು.