4:42 PM Wednesday 9 - September 2026

ಮಂಗಳೂರು: ಹಜ್ ಯಾತ್ರಾರ್ಥಿಗಳ ವೈದ್ಯಕೀಯ ತಪಾಸಣೆಗೆ ಸೂಚನೆ

haj yatra
09/09/2026

ಮಂಗಳೂರು: ರಾಜ್ಯ ಹಜ್ ಸಮಿತಿಯ ವತಿಯಿಂದ 2027ನೇ ಸಾಲಿನಲ್ಲಿ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳು ಸೆ.15ರೊಳಗೆ ಆರೋಗ್ಯ ತಪಾಸಣೆ ಮಾಡಿಸಿ ಹಜ್ ಸಮಿತಿಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕಿದೆ. ಹಾಗಾಗಿ ದ.ಕ. ಜಿಲ್ಲೆಯ ಮಂಗಳೂರು, ಉಳ್ಳಾಲ, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ ತಾಲೂಕುಗಳಲ್ಲಿ ಸಂಬಂಧಪಟ್ಟ ಸರ್ಕಾರಿ ಆರೋಗ್ಯ ಅಧಿಕಾರಿಯ ಮೂಲಕ ತಪಾಸಣೆ ಮಾಡಿಸುವಂತೆ ಪ್ರಕಟನೆ ತಿಳಿಸಿದೆ.

CBC, FBS, CHEST X-RAY, KFT, LFT ಹಾಗೂ 40 ವರ್ಷ ಪ್ರಾಯ ಮೇಲ್ಪಟ್ಟವರಿಗೆ ಇದರೊಂದಿಗೆ ECG ಕೂಡ ಮಾಡಿಸಬೇಕು. ತಪಾಸಣೆಗೆ ಹೋಗುವ ವೇಳೆ ಯಾತ್ರಾರ್ಥಿಗಳು ಕಡ್ಡಾಯವಾಗಿ ಖಾಲಿ ಹೊಟ್ಟೆಯಲ್ಲಿರಬೇಕು.

40 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟವರಿಗೆ 630 ರೂ. ಹಾಗೂ 40 ವರ್ಷಕ್ಕಿಂತ ಕೆಳಗಿನವರಿಗೆ 600 ರೂ. ತಪಾಸಣೆ ಶುಲ್ಕವನ್ನು ಅಭ್ಯರ್ಥಿಗಳೇ ಭರಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೊ.ಸಂ: ಮಂಗಳೂರು 9844631632, 9916647651, 9448463316, ಉಳ್ಳಾಲ 9164425372, 9900917656, ಮೂಡುಬಿದ್ರೆ 9008511802, ಬೆಳ್ತಂಗಡಿ 9686976087, ಪುತ್ತೂರು 9449662472, 9902982976, ಬಂಟ್ವಾಳ 6362620674, ಸುಳ್ಯ 9481765110, 9448215850ನ್ನು ಸಂಪರ್ಕಿಸಬೇಕು.

ತಪಾಸಣೆಗೆ ಹೋಗುವಾಗ ಮೆಡಿಕಲ್ ಫಾರ್ಮ್ ಹಾಗೂ ಒಂದು ಫೋಟೋ ಕೊಂಡೊಯ್ಯಬೇಕು ಎಂದು ಪ್ರಕಟನೆ ತಿಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version