ಮತ್ತೆ ಮಾಸ್ಕ್‌ ಕಡ್ಡಾಯ?: ಕೊವಿಡ್‌ ರೂಪಾಂತರಿ ತಳಿ ತಡೆಯಲು ಜಾರಿಯಾಗಲಿದೆ ಹೊಸ ನಿಯಮ!

covid
18/12/2023

ಬೆಂಗಳೂರು:  ರಾಜ್ಯಕ್ಕೆ ಕೊವಿಡ್‌ ರೂಪಾಂತರಿ ತಳಿ ಮತ್ತೊಮ್ಮೆ ಎಂಟ್ರಿಯಾಗಿದ್ದು, ಇದೇ ಸಂದರ್ಭದಲ್ಲಿ ಹಂತ ಹಂತವಾಗಿ ಸರ್ಕಾರ ಮಾಸ್ಕ್‌ ಕಡ್ಡಾಯ ಜಾರಿಗೊಳಿಸುವ ಮುನ್ಸೂಚನೆ ನೀಡಿದೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌,  60 ವರ್ಷದ ಮೇಲ್ಪಟ್ಟವರಿಗೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಕೊವಿಡ್‌ ವಿಚಾರದಲ್ಲಿ  ಆರೋಗ್ಯ ಇಲಾಖೆ ಇಂದು ಮಾರ್ಗಸೂಚಿ ಹೊರಡಿಸಲಿದೆ ಎಂದು ತಿಳಿಸಿದ್ದಾರೆ.

ರೂಪಾಂತರಿ ಕೊವಿಡ್‌ ವೈರಸ್‌ ಬಗ್ಗೆ ಯಾವುದೇ ಆತಂಕ ಬೇಡ, ಆದರೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ  ಆರೋಗ್ಯಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಡಾ.ರವಿ ಅವರ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ಕೂಡ ನಿನ್ನೆ ನಡೆಸಲಾಗಿದೆ ಎಂದು ತಿಳಿಸಿದರು.

60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಕಾಯಿಲೆ ಇರುವವರು ಹಾಗೂ ಉಸಿರಾಟದ ಸಮಸ್ಯೆ ಇರುವವರಿಗೆ ಮಾಸ್ಕ್‌ ಕಡ್ಡಾಯ ನಿಯಮ ಜಾರಿಗೆ ತಾಂತ್ರಿಕ ಸಮಿತಿ ಸಲಹೆ ನೀಡಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version