11:58 PM Saturday 25 - October 2025

81.5 ಕೋಟಿ ಭಾರತೀಯರ ಆಧಾರ್ ಮಾಹಿತಿ ಸೋರಿಕೆ ನಿಜನಾ.? ಸೈಬರ್-ಭದ್ರತಾ ಸಂಶೋಧಕರು ಏನು ಹೇಳುತ್ತಾರೆ..?

31/10/2023

ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ವಿವರಗಳು, ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತಹ ನಿರ್ಣಾಯಕ ಮಾಹಿತಿಯನ್ನು ಒಳಗೊಂಡಿರುವ 81.5 ಕೋಟಿ ಭಾರತೀಯ ನಾಗರಿಕರ ಡೇಟಾ ಸೋರಿಕೆಯಾಗಿದೆ ಎಂಬುದು ನಕಲಿ ಎಂದು ತೋರುತ್ತದೆ ಎಂದು ಸೈಬರ್ ಭದ್ರತಾ ಸಂಶೋಧಕರು ಹೇಳಿದ್ದಾರೆ. ಸ್ವತಂತ್ರ ಸೈಬರ್ ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಅವರು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, “ಆಧಾರ್ ಡೇಟಾ ಸುರಕ್ಷಿತವಾಗಿದೆ. 81.5 ಕೋಟಿ ಭಾರತೀಯರ ಆಧಾರ್ ಕಾರ್ಡ್‌ನ ಡೇಟಾ ಸೋರಿಕೆ ನಕಲಿ ಎಂದು ತೋರುತ್ತದೆ ಎಂದು ಹೇಳಿದ್ದಾರೆ.

 

ಅವರ ಪ್ರಕಾರ 81.5 ಕೋಟಿ ಜನರ ಡೇಟಾ ಸೋರಿಕೆಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ತೋರಿಸುವುದಿಲ್ಲ ಎಂದು ಹೇಳಿದ್ದಾರೆ.
ಡಾರ್ಕ್ ವೆಬ್ ನಲ್ಲಿ ಹ್ಯಾಕರ್ ‘ಪಿಡಬ್ಲ್ಯೂಎನ್ 0001’ ಖ್ಯಾತಿಯು ನಕಾರಾತ್ಮಕವಾಗಿದೆ. ಅವರು ಈ ಡೇಟಾವನ್ನು ಸೋರಿಕೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ರೀತಿಯ ಡೇಟಾವನ್ನು ಪೋಸ್ಟ್ ಮಾಡಿದ ಮತ್ತೊಂದು ಹ್ಯಾಕರ್ ಗುಂಪು ‘ಲೂಸಿಯಸ್’ ಅನ್ನು ಸಹ ಡಾರ್ಕ್ ವೆಬ್ ನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ” ಎಂದು ರಾಜಹರಿಯಾ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version