5:28 PM Wednesday 22 - October 2025

ವಾಯುಭಾರ ಕುಸಿತ: ಮತ್ತೊಂದು ಸುತ್ತಿನ ಮಳೆಯಾಗಲಿದೆಯೇ?

27/10/2020

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತಕ್ಕೆ ಪೂರಕವಾದ ವಾತಾವರಣ ಉಂಟಾಗಿದ್ದು, ಪರಿಣಾಮವಾಗಿ ಮತ್ತೊಂದು ಸುತ್ತಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.


ಅಕ್ಟೋಬರ್ 29ರ ನಂತರ ಮತ್ತೊಂದು ಸುತ್ತಿನ ಮಳೆಯಾಗುವ ಸಾಧ್ಯತೆಗಳಿವೆ. ಈ ನಡುವೆ ನೈರುತ್ಯ ಮುಂಗಾರು ಅವಧಿ ಮುಗಿಯುತ್ತಿದ್ದು, ನಾಳೆ ಈಶಾನ್ಯ ಹಿಂಗಾರು ಆರಂಭವಾಗುವ ಮುನ್ಸೂಚನೆಗಳಿವೆ.


ಇತ್ತೀಚೆಗಿನ ಭಾರೀ ಮಳೆಯ ಪರಿಣಾಮ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿ ಜನರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಅತಿವೃಷ್ಟಿಯಿಂದಾಗಿಯೂ ರಾಗಿ, ಶೇಂಗಾ, ಅಲಸಂದೆ, ಭತ್ತ ಮೊದಲಾದ ಬೆಳೆಗಳು ಹಾನಿಗೀಡಾಗಿವೆ ಆದರೆ ಈ ಬಾರಿ ಭಾರೀ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ರೆಡ್ಡಿ  ಹೇಳಿದರು.


ಇತ್ತೀಚಿನ ಸುದ್ದಿ

Exit mobile version