2:06 PM Tuesday 10 - November 2026

ಮೂಡುಬಿದಿರೆ: ಬಾಲಕಿಯ ಅತ್ಯಾಚಾರಕ್ಕೆ ಯತ್ನ: ಹುಲಿ ವೇಷಧಾರಿಯ ಬಂಧನ

pocso
20/09/2026

ಮೂಡುಬಿದಿರೆ: ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯ ವೇಳೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಆರೋಪದ ಮೇಲೆ ಹುಲಿ ವೇಷಧಾರಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಅಲಂಗಾರಿನ ಉಳಿಯ ನಿವಾಸಿ ಪವನ್ (20) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಮೂಡುಬಿದಿರೆ ಗಣೇಶೋತ್ಸವದ ಪ್ರಯುಕ್ತ ನಡೆದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹುಲಿವೇಷದ ತಂಡವೊಂದರಲ್ಲಿ ಪವನ್ ಭಾಗವಹಿಸಿದ್ದನು. ಅದೇ ತಂಡದೊಂದಿಗೆ 6 ವರ್ಷದ ಬಾಲಕಿಯೂ ಕೂಡ ಹುಲಿವೇಷ ಧರಿಸಿದ್ದಳು ಎಂದು ತಿಳಿದುಬಂದಿದೆ. ಹುಲಿವೇಷದ ವಾಹನದಲ್ಲಿದ್ದ ಬಾಲಕಿಯನ್ನು ಮೂತ್ರ ಮಾಡಲು ಕರೆದೊಯ್ಯುವ ನೆಪದಲ್ಲಿ ಮೂಡುಬಿದಿರೆ ಬಸ್ ನಿಲ್ದಾಣದ ಹಿಂಭಾಗದ ಶೌಚಾಲಯಕ್ಕೆ ಕರೆದೊಯ್ದ ಆರೋಪಿ ಪವನ್, ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಬಾಲಕಿಯ ತಂದೆಯು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಪವನ್ ವಿರುದ್ಧ ಬಿಎನ್ ಎಸ್ (BNS) ಮತ್ತು ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಆರೋಪಿ ಪವನ್ ವಿರುದ್ಧ ಈ ಹಿಂದೆ 2025ರಲ್ಲೂ ಕೂಡ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

 

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version