12:20 PM Thursday 21 - August 2025

ಭೀಕರ: ಜಿಮ್ ತರಬೇತುದಾರನಿಂದ ಯುವತಿಯ ಹತ್ಯೆ; 4 ತಿಂಗಳ ಬಳಿಕ ಶವ ಪತ್ತೆ!

27/10/2024

ನಾಲ್ಕು ತಿಂಗಳ ಹಿಂದೆ ಕೊಲೆಯಾದ ಯುವತಿಯ ಶವ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಪತ್ತೆಯಾಗಿದೆ.
ಜೂನ್ 24ರಂದು ಯುವತಿ ನಾಪತ್ತೆಯಾಗಿದ್ದಳು. ಈ ಕುರಿತು ತನಿಖೆ ನಡೆಸಿದಾಗ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಮಾಹಿತಿ‌ ನೀಡಿದ ಡಿಸಿಪಿ (ಉತ್ತರ ಕಾನ್ಪುರ) ಶ್ರವಣ್ ಕುಮಾರ್ ಸಿಂಗ್, ಘಟನೆಯ ದಿನದಂದು ಆರೋಪಿ ಮತ್ತು ಮೃತ ಯುವತಿ ಮದುವೆ ‌ಬಗ್ಗೆ ಮಾತನಾಡಿದ್ದರು. ಇದೇ ವೇಳೆ ಯುವತಿ ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಳು. ಅದು ವಾಗ್ವಾದಕ್ಕೆ ಕಾರಣವಾಗಿತ್ತು.

ಆ ಸಮಯದಲ್ಲಿ ಆತ ಆಕೆಯ ಕುತ್ತಿಗೆಗೆ ಗುದ್ದಿದ ನಂತರ ಆಕೆ ಮೂರ್ಛೆ ಹೋಗಿ ನಂತರ ಆತ ಆಕೆಯನ್ನು ಕೊಲೆ ಮಾಡಿದ್ದಾನೆ.
ಆ ವ್ಯಕ್ತಿ ಮೊಬೈಲ್ ಫೋನ್ ಬಳಸದ ಕಾರಣ ಆತನನ್ನು ಪತ್ತೆಹಚ್ಚುವುದು ಕಷ್ಟವಾಗಿತ್ತು ಎಂದು ಡಿಸಿಪಿ ಸಿಂಗ್ ಮಾಹಿತಿ ನೀಡಿದ್ದಾರೆ. ತನಿಖೆಗಾಗಿ ತಂಡಗಳನ್ನು ಪುಣೆ, ಆಗ್ರಾ ಮತ್ತು ಪಂಜಾಬ್ ಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಎನ್‌ಡಿಟಿವಿ ವರದಿಗಳ ಪ್ರಕಾರ, ಗ್ರೀನ್ ಪಾರ್ಕ್ ಪ್ರದೇಶದ ಜಿಮ್ ತರಬೇತುದಾರನಾದ ಆರೋಪಿ ವಿಮಲ್ ಸೋನಿ, ಪೊಲೀಸ್ ವಿಚಾರಣೆಯ ಸಮಯದಲ್ಲಿ ತಾನು ಉದ್ಯಮಿಯ ಪತ್ನಿಯನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡಲಾದ ಬಂಗಲೆಗಳ ಪ್ರದೇಶದಲ್ಲಿ ಸಮಾಧಿ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಕಾನ್ಪುರದ ರಾಯ್ಪುರ್ವಾ ಪ್ರದೇಶದ ನಿವಾಸಿಯಾದ ಅವರು, ನೆಲವನ್ನು ಅಗೆಯಿದ ನಂತರ ಶವವನ್ನು ಪತ್ತೆ ಮಾಡಿದ ಸ್ಥಳಕ್ಕೆ ಪೊಲೀಸರಿಗೆ ನಿರ್ದೇಶನ ನೀಡಿದರು.
ಕೊತ್ವಾಲಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version