ನೈಟ್ ಕರ್ಫ್ಯೂ ಜಾರಿ | 9 ಗಂಟೆಗೆ ಅಂಗಡಿ ಮುಂಗಟ್ಟುಗಳು ಕ್ಲೋಸ್

night curfew
21/04/2021

ಬೆಂಗಳೂರು: ಇಂದು ರಾತ್ರಿ 9ರಿಂದಲೇ ನೈಟ್ ಕರ್ಫ್ಯೂ ಜಾರಿಯಾಗಿದ್ದು,  ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ರಾತ್ರಿ ಸಮಯದಲ್ಲಿ ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ.

ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗುವವರು ಗುರುತಿನ ಚೀಟಿ ತೋರಿಸಬೇಕಿದೆ.  ಸರಕು ಸಾಗಣೆ, ಅಗತ್ಯವಸ್ತು, ಸೇವೆ ಹೋಮ್ ಡೆಲಿವರಿಗೆ ಮಾತ್ರ ಅವಕಾಶವಿರುತ್ತದೆ. ದೂರದೂರಿಗೆ ತೆರಳುವ ರೈಲು, ಬಸ್, ವಿಮಾನ ಸಂಚಾರ ಇರುತ್ತದೆ.

ಇಂದು 9 ಗಂಟೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಕ್ಲೋಸ್ ಮಾಡಲಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಿಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕರು ಆದಷ್ಟು ರಾತ್ರಿ ವೇಳೆ ಮನೆಯಿಂದ ಹೊರಬಾರದಂತೆ ಈಗಾಗಲೇ ಸರ್ಕಾರ ಮನವಿ ಮಾಡಿಕೊಂಡಿದೆ.

ಇತ್ತೀಚಿನ ಸುದ್ದಿ

Exit mobile version