ಉಗ್ರವಾದಿಗಳ ಕುಟುಂಬಗಳಿಗೆ ಜಮ್ಮು ಕಾಶ್ಮೀರದಲ್ಲಿ ಸರ್ಕಾರಿ ಕೆಲಸ ಸಿಗಲ್ಲ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ

ಉಗ್ರವಾದಿಗಳ ಕುಟುಂಬಗಳಿಗೆ ಮತ್ತು ಕಲ್ಲೆಸೆತದಲ್ಲಿ ಭಾಗಿಯಾಗುವವರ ಬಂಧುಗಳಿಗೆ ಜಮ್ಮು ಕಾಶ್ಮೀರದಲ್ಲಿ ಸರ್ಕಾರಿ ಕೆಲಸ ಸಿಗಲಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಉಗ್ರವಾದವನ್ನು ತಡೆಯುವ ದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಯಾರಾದರೂ ಉಗ್ರವಾದಿ ಸಂಘಟನೆಗಳಲ್ಲಿ ಸೇರ್ಪಡೆಗೊಂಡರೆ ಅವರ ಕುಟುಂಬಗಳಲ್ಲಿ ಯಾರಿಗೂ ಸರಕಾರಿ ಕೆಲಸ ನೀಡಬಾರದು ಎಂದು ನಾವು ನಿರ್ಧರಿಸಿದ್ದೇವೆ. ಕಲ್ಲೆಸೆತದಲ್ಲಿ ಭಾಗಿಯಾಗುವವರ ಬಂಧುಗಳಿಗೂ ಸರ್ಕಾರಿ ಕೆಲಸ ನೀಡಲಾಗದು. ಆದರೆ ನಮ್ಮ ಕುಟುಂಬಗಳಲ್ಲಿ ಯಾರಾದರೂ ಇಂತಹ ಸಂಘಟನೆಗಳಲ್ಲಿ ಸೇರಿಕೊಂಡಿದ್ದಾರೆ ಎಂದು ಯಾರಾದ್ರೂ ಮಾಹಿತಿ ನೀಡಿದರೆ ಅವರಿಗೆ ನಾವು ರಿಯಾಯಿತಿ ನೀಡುತ್ತೇವೆ. ಕೆಲವು ಮಾನವ ಹಕ್ಕು ಸಂಘಟನೆಗಳು ನಮ್ಮ ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಿವೆ. ಆದರೆ ಸರ್ಕಾರಕ್ಕೆ ಅಂತಿಮ ಜಯ ಲಭಿಸಲಿದೆ ಎಂದವರು ಹೇಳಿದ್ದಾರೆ.
ಗುಂಡಿನ ಚಕಮಕಿ ನಡೆಯುವಾಗ ಉಗ್ರವಾದಿಗಳಿಗೆ ಶರಣಾಗುವ ಅವಕಾಶವನ್ನು ನಾವು ನೀಡುತ್ತೇವೆ. ಅದಕ್ಕೆ ಒಪ್ಪದವರನ್ನು ಮಾತ್ರ ನಾವು ಸಾಯಿಸುತ್ತೇವೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth