ಕಅಬಾದ ನೇರ ನೆತ್ತಿಯ ಮೇಲೆ ಕಾಣಿಸಿಕೊಂಡ ಸೂರ್ಯ: ಮಸ್ಜಿದುಲ್ ಹರಾಮ್ ನಲ್ಲಿ ವಿಶೇಷ ಸನ್ನಿವೇಶ

ಇವತ್ತು ಮೇ 27ರ ಸೋಮವಾರದ ಮಧ್ಯಾಹ್ನ ಸೂರ್ಯನು ಕಅಬಾದ ನೇರ ನೆತ್ತಿಯ ಮೇಲೆ ಕಾಣಿಸಿಕೊಂಡ ಅಪರೂಪದ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ 18 ನಿಮಿಷದ ಸಮಯದಲ್ಲಿ ಮಸ್ಜಿದುಲ್ ಹರಾಮ್ ನಲ್ಲಿ ಮಧ್ಯಾಹ್ನದ ನಮಾಝ್ ನ ಆಜಾನ್ ವೇಳೆ ಈ ವಿಶೇಷ ಸನ್ನಿವೇಶ ಸೃಷ್ಟಿಯಾಗಿದೆ. ಈ ವರ್ಷ ಇದೇ ಮೊದಲ ಬಾರಿ ಇಂತದ್ದೊಂದು ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಕಾಬಾಕ್ಕೆ ನೆರಳೇ ಇರಲಿಲ್ಲ. ಸೂರ್ಯ ಕಅಬಾದ ನಡುನೆತ್ತಿಯಲ್ಲಿ 90 ಡಿಗ್ರಿಯಲ್ಲಿದ್ದ ಎಂದು ವರದಿಗಳು ತಿಳಿಸಿವೆ. ಮಕ್ಕ ಮತ್ತು ಕಅಬಾದ ಎಲ್ಲಾ ವಸ್ತುಗಳ ನೆರಳು ಈ ಸಂದರ್ಭದಲ್ಲಿ ಮರೆಯಾಗಿತ್ತು. ಕಿಬ್ ಲಾದ ದಿಕ್ಕನ್ನು ಸ್ಪಷ್ಟವಾಗಿ ಕಂಡುಕೊಳ್ಳುವುದಕ್ಕೆ ಈ ಹಿಂದಿನವರು ಸಾಮಾನ್ಯವಾಗಿ ಬೆತ್ತವನ್ನು ಲಂಬವಾಗಿ ಇಡುತ್ತಿದ್ದರು. ಈ ಸಂದರ್ಭದಲ್ಲಿ ನೆರಳಿನ ವಿರುದ್ಧ ಭಾಗದಲ್ಲಿ ಕಅಬಾದ ಸ್ಪಷ್ಟ ಜಾಗ ಎಂದು ತಿಳಿದುಕೊಳ್ಳಲಾಗುತ್ತಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth