11:23 AM Saturday 23 - August 2025

ಕಾವೇರಿ ಕಿಚ್ಚು: ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ತಡೆದು ನೀರು ಕೇಳಿದರೆ ಬಾರುಕೋಲಲ್ಲಿ ಹೊಡಿತೀವಿ ಎಂದು ಆಕ್ರೋಶ

protest
24/09/2023

ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಚಾಮರಾಜನಗರದಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದ್ದು ಅದೇ ರೀತಿ ಇಂದು ಕನ್ನಡಪರ ಸಂಘಟನೆಗಳು ಬಾರುಕೋಲು ಚಳವಳಿ ನಡೆಸಿದರು.

ಚಾಮರಾಜೇಶ್ವರ ದೇವಾಲಯದಿಂದ ಬಾರುಕೋಲು ಬೀಸುತ್ತಾ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ  ರಸ್ತೆ ತಡೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಈ ವೇಳೆ, ಸರಕು ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದ ಲಾರಿಯನ್ನು ತಡೆದು ನೀರು ಕೇಳಿದರೆ ಬಾರುಕೋಲಲ್ಲಿ ಹೊಡಿತೀವಿ ಎಂದು ಆಕ್ರೋಶ ಹೊರಹಾಕಿದರು‌.

ಇನ್ನು, ಇದೇ ರೀತಿ ನೀರನ್ನು ಹರಿಸುತ್ತಿದ್ದರೇ ಮುಂದಿನ ಶುಕ್ರವಾರ ಇಲ್ಲವೇ ಶನಿವಾರ ಚಾಮರಾಜನಗರ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಕನ್ನಡಪರ ಸಂಘಟನೆಗಳು ಕಳೆದ 19 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬರುತ್ತಿವೆ.

ಇತ್ತೀಚಿನ ಸುದ್ದಿ

Exit mobile version