ಬ್ರಿಟನ್ ಸಂಸತ್ತಿಗೆ ದಾಖಲೆ ಸಂಖ್ಯೆಯಲ್ಲಿ ಆಯ್ಕೆಯಾದ ಭಾರತ ಮೂಲದ ಸಂಸದರು

06/07/2024

ಬ್ರಿಟನ್ ಸಂಸತ್ತಿಗೆ ಶುಕ್ರವಾರ ದಾಖಲೆ ಸಂಖ್ಯೆಯಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್ ಪಾರ್ಟಿ ಹೀನಾಯ ಸೋನು ಅನುಭವಿಸಿದ್ದರೂ, ಕೆಲ ಭಾರತೀಯ ಮೂಲದವರು ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಸತ್ತಿಗೆ ಆಯ್ಕೆಯಾದ 28 ಮಂದಿಯ ಪೈಕಿ 12 ಮಂದಿ ಸಿಖ್ ಸಮುದಾಯಕ್ಕೆ ಸೇರಿದವರು.

ಎಲ್ಲಾ ಸಿಖ್ ಸಂಸದರು ಲೇಬರ್ ಪಕ್ಷಕ್ಕೆ ಸೇರಿದವರು. ಇವರಲ್ಲಿ ಒಂಬತ್ತು ಮಂದಿ ಮೊದಲ ಬಾರಿಗೆ ಆಯ್ಕೆಯಾಗಿದ್ದರೆ, ಇಬ್ಬರು ಮೂರನೇ ಬಾರಿ ಹಾಗೂ ಒಬ್ಬರು ಎರಡನೇ ಬಾರಿ ಹೌಸ್ ಆಫ್ ಕಾಮನ್ಸ್ ಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಆರು ಮಂದಿ ಮಹಿಳೆಯರೂ ಹೌಸ್ ಆಫ್ ಕಾಮನ್ಸ್ ಗೆ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಯಾಕ್‌ಶೈರ್ನ ರಿಚ್‌ಮಂಡ್‌ ಹಾಗೂ ನಾರ್ತಲೆಟ್ರೊನ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಪ್ರೀತ್ ಕೌರ್ ಗಿಲ್ ಮತ್ತು ತನ್ಮನ್‍ಜೀತ್ ಸಿಂಗ್ ಧೇಸಿ ಲೇಬರ್ ಪಕ್ಷದ ಅಭ್ಯರ್ಥಿಗಳಾಗಿ ಸತತ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ನಾದಿಯಾ ವಿಠೋಮ್ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. 2019ರ ಚುನಾವಣೆಯಲ್ಲಿ ಅವರು 23ನೇ ವಯಸ್ಸಿನಲ್ಲೇ ಸಂಸತ್ತಿಗೆ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಸಂಸದೆ ಎನಿಸಿಕೊಂಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version