ಪ್ರಿಯಕರನಿಗಾಗಿ ಪಾಕಿಸ್ತಾನಕ್ಕೆ ಹೋದ ಅಂಜುಗೆ ದುಬಾರಿ ಗಿಫ್ಟ್ ನೀಡಿದ ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ..!
ತನ್ನ ಫೇಸ್ ಬುಕ್ ಸ್ನೇಹಿತ ನಸ್ರುಲ್ಲಾನ್ನು ಪ್ರೀತಿಸಿ ಪಾಕಿಸ್ತಾನಕ್ಕೆ ಹೋದ ಭಾರತೀಯ ಮಹಿಳೆ ಅಂಜು ತನ್ನ ಪತಿ ಅರವಿಂದ್ ಕುಮಾರ್ ಅವರನ್ನು ಬಿಟ್ಟು ಪಾಕಿಸ್ತಾನಿಯನ್ನು ಮದುವೆಯಾಗಿದ್ದಾಳೆ. ಹೀಗೆ ಪಾಕಿಸ್ತಾನಕ್ಕೆ ಹೋಗಿ ಮತಾಂತರಗೊಂಡ ಈಕೆಗೆ ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು 10 ಮಾರ್ಲಾ ವಸತಿ ಭೂಮಿ, 50,000 ಪಿಕೆಆರ್ ಚೆಕನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಉಡುಗೊರೆಗಳು ಈಗ ಫಾತಿಮಾ ಆಗಿ ಮತಾಂತರಗೊಂಡಿರುವ ಅಂಜುಗೆ ಪಾಕಿಸ್ತಾನ ತಮ್ಮದೇ ಮನೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ ಎಂದು ಖಾನ್ ಹೇಳಿಕೆ ನೀಡಿದ್ದಾರೆ. ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜು ಮತ್ತು ನಸ್ರುಲ್ಲಾ ಅವರೊಂದಿಗೆ ಸಂವಾದ ನಡೆಸಿ ನಂತರ ಉಡುಗೊರೆಗಳ ಕುರಿತು ಹೇಳಿಕೆ ನೀಡುವ ವಿಡಿಯೊ ವೈರಲ್ ಆಗಿದೆ.
‘ಯಾರಾದರೂ ಇಲ್ಲಿಗೆ ಬಂದಾಗ ಅವರಿಗೆ ಎದುರಾಗುವ ಮುಖ್ಯ ಸಮಸ್ಯೆ ವಸತಿ. ನಮ್ಮಲ್ಲಿ ಪ್ರಾಜೆಕ್ಟ್ ಚಾಲನೆಯಲ್ಲಿರುವ ಕಾರಣ, ನಾವು ಅವರಿಗೆ ಇಲ್ಲಿ ಅವಕಾಶ ಕಲ್ಪಿಸಬಹುದು ಎಂದು ನಾವು ಭಾವಿಸಿದ್ದೇವೆ. ನಮ್ಮ ಆಡಳಿತ ಮಂಡಳಿ ಅದನ್ನು ಅನುಮೋದಿಸಿದೆ. ನಾವು ಅವಳ ಹೆಸರಿಗೆ ಜಮೀನು ನೀಡಿದ್ದೇವೆ. ಇಸ್ಲಾಂಗೆ ಮತಾಂತರಗೊಂಡ ನಂತರ ಅವಳು ಯಾವುದೇ ತೊಂದರೆ ಎದುರಿಸಲಿಲ್ಲ ಎಂದು ಅವಳು ಭಾವಿಸದಿರಲು ಹೀಗೆ ಮಾಡಿದ್ದು. ಉಳಿದವು ಎಲ್ಲಾ ಸಣ್ಣ ಉಡುಗೊರೆಗಳಾಗಿವೆ. ಇದರಿಂದ ಅವಳು ಇದನ್ನು ತನ್ನ ಮನೆಯನ್ನಾಗಿ ಮಾಡಿಕೊಳ್ಳಬಹುದು ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದರು.
ಇತ್ತ ಅಂಜು ಅವರ ಪತಿ ಅರವಿಂದ್ ಕುಮಾರ್ ಅವರು ಅಂಜು ಯಾರನ್ನೂ ಮದುವೆಯಾಗಲು ಸಾಧ್ಯವಿಲ್ಲ. ಯಾಕೆಂದರೆ ಅವಳು ಇನ್ನೂ ತನ್ನ ಹೆಂಡತಿಯಾಗಿದ್ದಾಳೆ ಎಂದಿದ್ದಾರೆ. 2007 ರಲ್ಲಿ ವಿವಾಹವಾದ ನಮಗೆ ಮಗಳಿದ್ದಾಳೆ. ಜುಲೈ 20 ರಂದು ಅಂಜು ತನ್ನ ಸ್ನೇಹಿತರನ್ನು ಭೇಟಿಯಾಗಲು ಜೈಪುರಕ್ಕೆ ಹೋಗುವುದಾಗಿ ಹೇಳಿದ್ದರು. ಆದರೆ ಆಕೆ ವಾಘಾ ಮೂಲಕ ಗಡಿ ದಾಟಿ ಪಾಕಿಸ್ತಾನದಲ್ಲಿದ್ದಾಳೆ ಎಂದು ಮನೆಯವರಿಗೆ ಗೊತ್ತಾಯಿತು. ನಂತರ ನಸ್ರುಲ್ಲಾ ಅವರೊಂದಿಗಿನ ವಿವಾಹದ ಸುದ್ದಿ ಮಾಧ್ಯಮ, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ತಾನು ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ವಿಚ್ಛೇದನದ ಪತ್ರವನ್ನು ಸಲ್ಲಿಸಿದ್ದೇನೆ ಎಂದು ಅಂಜು ಹೇಳಿಕೊಂಡಿದ್ದಾಳೆ. ಆದರೆ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಅರವಿಂದ್ ಹೇಳಿದ್ದಾರೆ.
34 ವರ್ಷದ ಅಂಜು ತನಗಿಂತ ಐದು ವರ್ಷ ಕಿರಿಯ ನಸ್ರುಲ್ಲಾ ಜತೆ 2019 ರಲ್ಲಿ ಫೇಸ್ ಬುಕ್ ನಲ್ಲಿ ಸ್ನೇಹಿತರಾಗಿದ್ದಾರೆ. ಜುಲೈ 22 ರಂದು ಅಂಜು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದಾಳೆ. ನಸ್ರುಲ್ಲಾ ಆಕೆಯನ್ನು ರಾವಲ್ಪಿಂಡಿಯಲ್ಲಿ ಬರಮಾಡಿಕೊಂಡರು. ಅವರು ಮಾನ್ಯವಾದ 30 ದಿನಗಳ ವೀಸಾದಲ್ಲಿ ಪ್ರಯಾಣಿಸಿದರು. ಅಂಜು ತನ್ನ ವೀಸಾ ಅವಧಿ ಮುಗಿದ ನಂತರ ಭಾರತಕ್ಕೆ ಹಿಂತಿರುಗುವುದಾಗಿ ನಸ್ರುಲ್ಲಾ ಈ ಹಿಂದೆ ಹೇಳಿಕೊಂಡ ನಂತರ ಅವರಿಬ್ಬರು ಮದ್ವೆ ಆಗಿದ್ದಾರೆ. ಈಗ ಅಂಜು ಮತಾಂತರಗೊಂಡು ಫಾತಿಮಾ ಆಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























