4:38 AM Wednesday 22 - October 2025

ಮತ್ತಷ್ಟು ಬರೆ: ಪಾಕಿಸ್ತಾನದಲ್ಲಿ ಲೀಟರ್ ಗೆ 300 ರೂಪಾಯಿ ಗಡಿ ದಾಟಿದ ಪೆಟ್ರೋಲ್, ಡೀಸೆಲ್ ಬೆಲೆ: ಇತಿಹಾಸದಲ್ಲೇ ಮೊದಲ ಬಾರಿಗೆ ದುಬಾರಿ ಬೆಲೆ..!

01/09/2023

ಗಾಯದ ಮೇಲೆ ಮತ್ತಷ್ಟು ಬರೆ. ಹೌದು. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ ದಾಖಲಾಗಿದೆ. ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ದರದಲ್ಲಿ ಒಮ್ಮೆಲೇ 14.91 ರೂ. ಏರಿಕೆ ಕಂಡಿದೆ.

ಪಾಕಿಸ್ತಾನದ ಉಸ್ತುವಾರಿ ಸರ್ಕಾರ ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 14.91 ರೂ ಹಾಗೂ ಡೀಸೆಲ್ ದರದಲ್ಲಿ 18.44 ರೂ. ಏರಿಕೆಯಾಗಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಹೀಗಾಗಿ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂಪಾಯಿ 305.36 ಮತ್ತು ಹೆಚ್‌ಎಸ್‌ಡಿ ಪೆಟ್ರೋಲ್ ಲೀಟರ್‌ಗೆ 311.84 ರೂಪಾಯಿ ಆಗಿದೆ ಎಂದು ಹಣಕಾಸು ಸಚಿವಾಲಯ ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದೆ.

ದೇಶದಲ್ಲಿ ಇಂದು ಕೂಡ ರೂಪಾಯಿ ಮೌಲ್ಯ ನಷ್ಟ ಮುಂದುವರೆದಿದ್ದು, ಅಂತರಬ್ಯಾಂಕ್ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ವಿರುದ್ಧ 1.09 ರೂ. 305.54ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಉಸ್ತುವಾರಿ ಸರ್ಕಾರದ ಆಡಳಿದ ಆರಂಭದಿಂದ ರೂಪಾಯಿ ಮೌಲ್ಯ 4.6 ರಷ್ಟು ಕುಸಿದಿದ್ದು, ಪಾಕಿಸ್ತಾನದ ಅಲ್ಪಾವಧಿಯ ಹಣದುಬ್ಬರ ವರ್ಷದಿಂದ ವರ್ಷಕ್ಕೆ 27.57 ರಷ್ಟು ಏರಿಕೆಯಾಗಿದೆ.

ಇತ್ತೀಚಿನ ಸುದ್ದಿ

Exit mobile version