5:00 AM Thursday 16 - October 2025

ಪಾರ್ಟಿ ಮುಗಿಸಿ ಬರುತ್ತಿದ್ದ ಮಹಿಳೆಯನ್ನು ಅಪಹರಿಸಿ ಕಾರಿನಲ್ಲಿಯೇ ಅತ್ಯಾಚಾರ!

uttarpradesh news
08/04/2021

ಲಕ್ನೋ: ಬರ್ತ್ ಡೇ ಪಾರ್ಟಿಯಿಂದ ಮರಳುತ್ತಿದ್ದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ನಂದಗ್ರಾಮ್ ಪ್ರದೇಶದಲ್ಲಿ ನಡೆದಿದ್ದು, ತನ್ನ 13 ವರ್ಷ ವಯಸ್ಸಿನ ಮಗನ ಎದುರಲ್ಲಿಯೇ ಮಹಿಳೆಯನ್ನು ಆರೋಪಿಗಳು ಎಳೆದೊಯ್ದಿದ್ದಾರೆ.

ಭಾನುವಾರ ಸಂಜೆ  ಇಲ್ಲಿನ ಹಿಂಡನ್ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಈ ಘಟನೆ ನಡೆದಿದೆ. ಬರ್ತ್ ಡೇ ಪಾರ್ಟಿಗೆ ಹೋಗಿದ್ದ ಮಹಿಳೆ ತನ್ನ 13 ವರ್ಷ ವಯಸ್ಸಿನ ಪುತ್ರನೊಂದಿಗೆ ತನ್ನ ಮನೆಗೆ ಮರಳುತ್ತಿದ್ದರು. ಈ ಸಂದರ್ಭ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಹಿಳೆಯನ್ನು ಅಡ್ಡ ಹಾಕಿ ಕಾರಿನಲ್ಲಿ ಅಪಹರಿಸಿದ್ದಾರೆ.

ಅಪಹರಣದ ಬಳಿಕ ಮಹಿಳೆಯನ್ನು ಕಾರಿನಲ್ಲಿಯೇ ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.  ಘಟನೆಗೆ ಸಂಬಂಧಿಸಿದಂತೆ ಆಸಿಫ್ ಮತ್ತು ಶಾದಾಬ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಕಾರು, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಉಳಿದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಆರೋಪಿಗಳ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಬಂಧಿಸುತ್ತೇವೆ ಎಂಧು ಡಿಐಜಿ ಅಮಿತ್ ಪಾಠಕ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version