8:59 PM Thursday 6 - November 2025

ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ ಪ್ರಯಾಣಿಕ: ಪೊಲೀಸ್ ಠಾಣೆಗೆ ಬಸ್ ಕೊಂಡೊಯ್ದ ಚಾಲಕ!

15/10/2023

ಪ್ರಯಾಣಿಕನೋರ್ವ ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ ಕಾರಣಕ್ಕಾಗಿ ಆತನಿಗೆ ಕಂಡಕ್ಟರ್ ಬೈದುದಲ್ಲದೇ ಚಾಲಕ ನೇರ ಪ್ರಯಾಣಿಕರನ್ನು ಕೂರಿಸಿಕೊಂಡು ಪೊಲೀಸ್ ಠಾಣೆಗೆ ತಂದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ ಪುತ್ತೂರು ಸರ್ಕಾರಿ ಬಸ್ಸನ್ನು ಹತ್ತಿದ್ದಾರೆ. ಬಸ್ ಕಂಡಕ್ಟರ್ ಟಿಕೆಟ್ ಪಡೆಯಲು ಬಂದಾಗ ಪ್ರಯಾಣಿಕನ ಕೈಯಲ್ಲಿ ಚೀಲವೊಂದ್ದಿದ್ದು,ಇದರ ಬಗ್ಗೆ ವಿಚಾರಿಸಿದ್ದಾನೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದಾಗ ಬಸ್ ನಿಂದ ಇಳಿಯುವಂತೆ ಒತ್ತಾಯಿಸಿದ್ದಾನೆ.

ಕೋಳಿ ಮಾಂಸ ಬಸ್ ನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನದ್ದು, ಆದರೆ ಕೂಲಿ ಕಾರ್ಮಿಕನಿಗೆ ಇದರ ಅರಿವಿಲ್ಲದೆ , ಬಸ್ ನಿಂದ ಇಳಿಯಲು ಒಪ್ಪಲಿಲ್ಲ. ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ.

ನಿರ್ವಾಹಕ ಪ್ರಯಾಣಿಕನಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ. ಈತ ಬಸ್ ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ ನ್ನು ನೇರ ಪೊಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಎಳೆದು ಇಳಿಸಿ ಹೋಗಿದ್ದಾನೆ.  ಇದೇ ವೇ ಠಾಣಾ ಎಸ್ ಐ ಸರ್ಕಾರಿ ಬಸ್ ಚಾಲಕ, ಕಂಡಕ್ಟರ್ ಗೆ ಬುದ್ದಿಮಾತು ಹೇಳಿದ ಘಟನೆಯೂ ನಡೀತು.

ಇತ್ತೀಚಿನ ಸುದ್ದಿ

Exit mobile version