10:52 AM Wednesday 28 - January 2026

ಪಟಾಕಿ ಸಿಡಿದು ಬಿಜೆಪಿ ಸಂಸದೆಯ ಮೊಮ್ಮಗಳು ಸಾವು

17/11/2020

ಪ್ರಯಾಗ್ ರಾಜ್: ಪಟಾಕಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಸಂಸದೆ ರೀತಾ ಬಹುಗುಣ ಅವರ ಮೊಮ್ಮಗಳು  ಸಾವನ್ನಪ್ಪಿದ ಘಟನೆ ನಡೆದಿದೆ.

ರೀತಾ ಬಹುಗುಣ ಅವರ ಪುತ್ರ ಮಾಯಾಂಕ್ ಜೋಷಿಯವರ ಪುತ್ರಿಯಾಗಿದ್ದ 8 ವರ್ಷದ ಮಗು ದೀಪಾವಳಿ ಪ್ರಯಕ್ತ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಳು.  ಈ ವೇಳೆ ಈ ಘಟನೆ ನಡೆದಿದೆ.

ಪಟಾಕಿ ಸಿಡಿದ ಪರಿಣಾಮ ಬಾಲಕಿಗೆ  ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆಕೆಯನ್ನು ಏರ್ ಆಯಂಬುಲೆನ್ಸ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಲಕಿಯನ್ನು ಬದುಕಿಸಲು ವೈದ್ಯರು ಸತತ ಪ್ರಯತ್ನ ಮಾಡಿದ ಬಳಿಕವೂ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version