9:57 AM Thursday 16 - October 2025

ಅಪ್ರಾಪ್ತೆಯನ್ನು ಮನೆಕೆಲಸಕ್ಕೆ ಇಟ್ಟುಕೊಂಡು ಚಿತ್ರಹಿಂಸೆ: ಮಹಿಳಾ ಪೈಲಟ್ ಗೆ ಬಿತ್ತು ಗೂಸಾ..!

19/07/2023

ಅಪ್ರಾಪ್ತೆಯನ್ನು ಮನೆಕೆಲಸಕ್ಕೆ ಇಟ್ಟುಕೊಂಡು ಚಿತ್ರಹಿಂಸೆ ನೀಡಿದ ಮಹಿಳಾ ಪೈಲಟ್​​ಗೆ ಸಾರ್ವಜನಿಕರು ಥಳಿಸಿದ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ವೀಡಿಯೊವೊಂದು ವೈರಲ್​​ ಆಗಿದ್ದು, ಈ ಮಹಿಳಾ ಪೈಲಟ್ ದಿನನಿತ್ಯ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ವಿಡಿಯೋದಲ್ಲಿ ಮಹಿಳಾ ಪೈಲಟ್​ಗೆ ಸಮವಸ್ತ್ರದಲ್ಲಿರುವಾಗಲೇ ಥಳಿಸುತ್ತಿರುವುದನ್ನು ಕಾಣಬಹುದು. ಇನ್ನೂ ಕೆಲವು ಮಹಿಳೆಯರು ಆಕೆಯ ತಲೆಕೂದಲು ಹಿಡಿದು ಎಳೆದಾಡಿ ಹಿಗ್ಗಮುಗ್ಗ ಥಳಿಸಿದ್ದಾರೆ. ವಿಡಿಯೋದಲ್ಲಿ ಆಕೆ ಕ್ಷಮಿಸಿ ಎಂದು ಕೇಳಿದ್ರೂ ಬಿಡದೆ ಮನಬಂದಂತೆ ಹೊಡೆದಿದ್ದಾರೆ.
ಮತ್ತೊಂದು ಕಡೆ ಆಕೆಯ ಪತಿಗೂ ಕೂಡ ಪುರುಷರ ಗುಂಪೊಂದು ಥಳಿಸಿದೆ. ಈತನಿಗೆ ಥಳಿಸುವುದನ್ನು ನೋಡಿ ಸ್ಥಳೀಯರು ಬಂದು ರಕ್ಷಿಸಿದ್ದಾರೆ. ನಂತರ ಅಲ್ಲಿಂದ ಆತನು ಓಡಿ ಹೋಗಿ ಪತ್ನಿಯನ್ನು ಬಿಡಿಸಲು ಮುಂದಾಗುತ್ತಾನೆ. ವರದಿಗಳ ಪ್ರಕಾರ 2 ತಿಂಗಳ ಹಿಂದೆ 10 ವರ್ಷದ ಬಾಲಕಿಯನ್ನು ಮನೆ ಕೆಲಸಕ್ಕೆಂದು ಇಟ್ಟುಕೊಂಡಿದ್ದರು. ಇಂದು ಹುಡುಗಿಯ ದೇಹದ ಮೇಲೆ ಇರುವ ಗಾಯಗಳನ್ನು ನೋಡಿ ಮನೆಯವರು ಹುಡುಗಿಯನ್ನು ಪ್ರಶ್ನಿಸಿದ್ದಾರೆ. ಆಗ ಬಾಲಕಿ ತಾನು ಕಳ್ಳತನ ಮಾಡಿದ್ದೇನೆ ಎಂದು ಆರೋಪಿಸಿ ದಂಪತಿ ನನಗೆ ಹೊಡೆದಿದ್ದಾರೆ ಎಂದು ಹೇಳಿದ್ದಾಳೆ.
ಈ ಬಗ್ಗೆ ಅಕ್ಕ-ಪಕ್ಕದ ಮನೆಗೂ ಹುಡುಗಿಯ ಮನೆಯವರು ತಿಳಿಸಿದ್ದಾರೆ. ಬಾಲಕಿಯ ತೋಳುಗಳ ಮೇಲೆ ಮತ್ತು ಆಕೆಯ ಕಣ್ಣುಗಳ ಕೆಳಗೆ ಗಾಯದ ಗುರುತುಗಳನ್ನು ನೋಡುತ್ತಿದ್ದಂತೆ ಅವರು ಕೂಡ ದಂಪತಿ ಮೇಲೆ ದಾಳಿ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಪೊಲೀಸ್​​​ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದು, ದಂಪತಿಗಳನ್ನು ಬಂಧಿಸಿದ್ದಾರೆ. ಈ ಪ್ರಕಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಾರಕಾದ ಹಿರಿಯ ಪೊಲೀಸ್ ಅಧಿಕಾರಿ ಎಂ ಹರ್ಷವರ್ಧನ್ ಅವರು ಬಾಲಕಿಯ ತೋಳುಗಳಲ್ಲಿ ಸುಟ್ಟ ಗಾಯದ ಗುರುತುಗಳನ್ನು ಗುರುತಿಸಿದ್ದಾರೆ. ಆಕೆಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಬಾಲಕಿ ಜತೆಗೆ ಸಮಾಲೋಚನೆ ನಡೆಸಿದ್ದು. ಆಕೆಯ ಹೇಳಿಕೆಯ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ, ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ಮತ್ತು ಬಾಲಾಪರಾಧಿ ನ್ಯಾಯ (ಆರೈಕೆ ಮತ್ತು) ಕಟ್ಟುನಿಟ್ಟಾದ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version