ಎನ್ ಡಿಎ ಮೈತ್ರಿಕೂಟವು ‘ಆಲಿಬಾಬಾ ಮತ್ತು ನಲ್ವತ್ತು ಕಳ್ಳರ’ ಕತೆಯಂತಿದೆ ಎಂದು ವ್ಯಂಗ್ಯವಾಡಿದ ಎಎಪಿ ಪಕ್ಷ

19/07/2023

ಕೇಂದ್ರದಲ್ಲಿ 38 ಪಕ್ಷಳ ಜೊತೆಗೆ ಮೈತ್ರಿ ಮಾಡಿಕೊಂಡಿರುವ ನರೇಂದ್ರ ಮೋದಿ ಸರ್ಕಾರವು ‘ಆಲಿಬಾಬಾ ಮತ್ತು ನಲ್ವತ್ತು ಕಳ್ಳರ ಗುಂಪಿನ ಕತೆಯಂತಿದೆ’ ಎಂದು ಕರ್ನಾಟಕದ ಆಮ್ಆದ್ಮಿ ಪಕ್ಷವು ಬಿಜೆಪಿಯ ಕುರಿತು ವ್ಯಂಗ್ಯವಾಡಿದೆ.

ಎನ್ ಡಿಎ ಮತ್ತು ವಿಪಕ್ಷಗಳ ನಡುವಿನ ಟೀಕಾ ಸರಣಿ ಮುಂದುವರಿದಿದ್ದು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಗುಂಪಿನಲ್ಲಿ ಎಷ್ಟೋ ಮಂದಿ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ ಎಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.
ಆಲಿಬಾಬಾ ಮತ್ತು ನಲ್ವತ್ತು ಕಳ್ಳರ ಕತೆಯನ್ನು ಎಲ್ಲರೂ ಕೇಳಿರಬಹುದು.

ಇದು ಢೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು. ಈ ಗುಂಪಿನಲ್ಲಿ ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು, ಇಡಿ– ಐಟಿ ಭಯದಿಂದ ಬಂದವರು, ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರೂ ಇದ್ದಾರೆ. ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುವ ಬಹಳಷ್ಟು ಗಂಜಿ ಗಿರಾಕಿಗಳಿದ್ದಾರೆ. ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ. ಎಷ್ಟೇ ದೊಡ್ಡ ಭ್ರಷ್ಟರಾಗಿದ್ದರೂ ಪಕ್ಷ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುವ ಬಿಜೆಪಿಯು ವಾಷಿಂಗ್ ಮಿಷನ್ ಪಕ್ಷ ಎಂದು ಟ್ವಿಟ್ಟರ್ ನಲ್ಲಿಹೇಳಿದೆ.

ಅಲ್ಲದೇ ಎನ್ ಡಿಎ‌ನಲ್ಲಿ ಎನ್ ಎಂದರೆ ನರೇಂದ್ರ, ಡಿ ಎಂದರೆ ಡಮ್ಮಿ ಆಫ್, ಎಎಂದರೆ ಅಂಬಾನಿಮ್ ಅದಾನಿ ಎಂದು ಲೇವಡಿ ಮಾಡಿದೆ.
ಬೆಂಗಳೂರಿನಲ್ಲಿ ನಿನ್ನೇ ನಡೆದ ವಿಪಕ್ಷಗಳ ಸಭೆಯಲ್ಲಿ ಯುಪಿಎ ಅನ್ನು ಇಂಡಿಯಾ ಎಂದು ಮರು ನಾಮಕರಣ ಮಾಡಿದ ಬಳಿಕ ಹೊಸದಿಲ್ಲಿಯಲ್ಲಿ ನಡೆದ ಎನ್‌ ಡಿಎ ಸಭೆಯಲ್ಲಿ ಎನ್‌ಡಿಎ ಅನ್ನು ಪ್ರಧಾನಿ ಮೋದಿ ಅವರು ನ್ಯೂ ಡೇವಲಪ್ಮೆಂಟ್ ಆಸ್ಪಿರೇಷನ್ ಎಂದು ಘೋಷಿಸಿದ್ದರು. ಅದನ್ನು ಈಗ ಆಮ್‌ ಆದ್ಮಿ ಪಕ್ಷ ಗೇಲಿ ಮಾಡಿ ಈ ಕುರಿತ ವ್ಯಂಗ್ಯ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿ ಠಕ್ಕರ್ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version