ಚೀನಾದ ವಿದೇಶಾಂಗ ಸಚಿವ ನಾಪತ್ತೆ: ಮೂರು ವಾರಗಳಿಂದ ಮಿನಿಸ್ಟರ್ ಮಿಸ್ಸಿಂಗ್..!

19/07/2023

ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರು ಕಳೆದ ಮೂರು ವಾರಗಳಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತವೆ.

ಕಳೆದ ವಾರ ಜಕರ್ತಾದಲ್ಲಿ ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಶೃಂಗಸಭೆಗೆ ಕ್ವಿನ್ ಗ್ಯಾಂಗ್ ಗೈರಾಗಿದ್ದರು. ಜೂನ್ 25ರಂದು ಬೀಜಿಂಗ್‌ನಲ್ಲಿ ವಿಯೇಟ್ನಾಂ, ರಷ್ಯಾ ಮತ್ತು ಶ್ರೀಲಂಕಾದ ರಾಯಭಾರಿಗಳನ್ನು ಭೇಟಿ ಮಾಡಿದ್ದರು. ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಸಂದರ್ಭದಲ್ಲಿ ಎಂದು ಹೇಳಲಾಗಿದೆ.

ಕ್ವಿನ್ ಗ್ಯಾಂಗ್ ಸತತ ಮೂರು ವಾರಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಹಿನ್ನೆಲೆ ಅವರ ಸ್ಥಾನವನ್ನು ದೇಶದ ಉನ್ನತ ರಾಜತಾಂತ್ರಿಕ ಮತ್ತು ಮುಖ್ಯಸ್ಥರಾಗಿರುವ ವಾಂಗ್ ಯೀ ತೆಗೆದುಕೊಂಡಿದ್ದಾರೆ. ಅಲ್ಲದೇ ಕ್ವಿನ್ ಅವರ ಅನುಪಸ್ಥಿತಿಯಲ್ಲಿ ಚೀನಾದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಮುನ್ನಡೆಸಿದ್ದಾರೆ.

ಕ್ವಿನ್ ಅನಾರೋಗ್ಯದ ಕಾರಣ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಚೀನಾ ಅಧಿಕೃತವಾಗಿ ಹೇಳಿದೆ.

ಆದರೆ ಅವರು ಚಿಕಿತ್ಸೆ ಪಡೆಯುತ್ತಿರುವ ಅಥವಾ ಆಸ್ಪತ್ರೆಯಲ್ಲಿರುವ ಯಾವುದೇ ಫೋಟೋಗಳು ಹೊರಬಾರದ ಕಾರಣ ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಕೇಳಿಬರುತ್ತಿವೆ. ವದಂತಿಗಳ ಪ್ರಕಾರ ಕ್ವಿನ್ ಅವರಿಗೆ ಹಾಂಗ್‌ಕಾಂಗ್ ಮೂಲದ ಫೀನಿಕ್ಸ್ ಟಿವಿಯ ಫೂ ಕ್ಸಿಯಾಟಿನ್ ಎಂಬ ಪತ್ರಕರ್ತೆಯೊಂದಿಗೆ ಸಂಬಂಧ ಹೊಂದಿದ್ದರು ಹೇಳಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version