12:36 PM Wednesday 22 - October 2025

ಆಸಿಯಾನ್ ಭಾರತ, ಪೂರ್ವ ಏಷ್ಯಾ ಶೃಂಗಸಭೆ: ಇಂಡೋನೇಷ್ಯಾಕ್ಕೆ ತೆರಳಿದ ಪ್ರಧಾನಿ ಮೋದಿ

07/09/2023

ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಿಗ್ಗೆ ಇಂಡೋನೇಷ್ಯಾಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಪ್ರಮುಖ ದೇಶಗಳೊಂದಿಗೆ ಭಾರತದ ಪಾಲುದಾರಿಕೆಯ ಭವಿಷ್ಯದ ರೂಪರೇಖೆಗಳ ಬಗ್ಗೆ ಚರ್ಚಿಸಲಿದ್ದಾರೆ. “ಜಕಾರ್ತಾದಲ್ಲಿ ಬಂದಿಳಿದಿದ್ದೇನೆ. ಆಸಿಯಾನ್ ಸಂಬಂಧಿತ ಸಭೆಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ ದೊರೆಯಿತು. ಜಕಾರ್ತಾದ ರಿಟ್ಜ್ ಕಾರ್ಲ್ಟನ್ ಹೋಟೆಲ್ ನಲ್ಲಿ ನೆರೆದಿದ್ದ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ‘ವಂದೇ ಮಾತರಂ’ ಮತ್ತು ‘ಮೋದಿ ಮೋದಿ’ ಘೋಷಣೆಗಳ ನಡುವೆ ಸ್ವಾಗತಿಸಿದರು.

ಭಾರತೀಯ ವಲಸಿಗರು ತ್ರಿವರ್ಣ ಧ್ವಜವನ್ನು ಬೀಸುವ ಮೂಲಕ ಮತ್ತು “ಮೋದಿ ಮೋದಿ” ಮತ್ತು “ವಂದೇ ಮಾತರಂ”, “ಹುಮಾರಾ ನೇತಾ ಕೈಸಾ ಹೋ, ನರೇಂದ್ರ ಮೋದಿಜಿ ಜೈಸಾ ಹೋ…” ಎಂದು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು.

ಇತ್ತೀಚಿನ ಸುದ್ದಿ

Exit mobile version