ನರೇಂದ್ರ ಮೋದಿ ನಿಜವಾದ ಹಿಂದೂ ಅಲ್ಲ: ಲಾಲು ಪ್ರಸಾದ್ ಯಾದವ್ ಟೀಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು ಟೀಕಾಪ್ರಹಾರ ನಡೆಸಿದ್ದಾರೆ. ಅವರ ತಾಯಿ ಹೀರಾಬೆನ್ ೨೦೨೨ರಲ್ಲಿ ನಿಧನರಾದಾಗ ಅವರು ಕೇಶಮುಂಡನ ಮಾಡಿಸಿಕೊಂಡಿರಲಿಲ್ಲ. ಹೀಗಾಗಿ ಅವರು ನಿಜವಾದ ಹಿಂದೂ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
ಹಿಂದೂ ಸಂಪ್ರದಾಯಗಳ ಪ್ರಕಾರ ಪೋಷಕರು ತೀರಿಕೊಂಡಾಗ ಗಂಡುಮಕ್ಕಳು ಕೇಶಮುಂಡನ ಮಾಡಿಸಿಕೊಳ್ಳಬೇಕು.
ಪಾಟ್ನಾದ ಗಾಂಧಿ ಮೈದಾನದಲ್ಲಿ ‘ಜನ ವಿಶ್ವಾಸ ಮಹಾ ರ್ಯಾಲಿ’ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಲಾಲು ಯಾದವ್ ಮೋದಿ ವಿರುದ್ಧ ಈ ಟೀಕೆಯನ್ನು ಮಾಡಿದರು.
ಸ್ವಜನ ಪಕ್ಷಪಾತ ಕುರಿತು ಹೇಳಿಕೆಗಾಗಿಯೂ ಮೋದಿ ವಿರುದ್ಧ ದಾಳಿ ನಡೆಸಿದ ಯಾದವ್, ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಈ ವಿಷಯದಲ್ಲಿ ಅವಹೇಳನಕ್ಕೆ ಗುರಿಯಾಗುತ್ತಾರೆ. ಮೋದಿಯವರಿಗೆ ಸ್ವಂತ ಕುಟುಂಬವಿಲ್ಲ ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth