11:33 PM Tuesday 8 - September 2026

‘ಮೇರೆ ಪ್ಯಾರೇ ದೇಶವಾಸಿಯೋಂ’ ಕೆಂಪು ಕೋಟೆ ಭಾಷಣದಲ್ಲಿ 40 ಬಾರಿ ಪದ ಬಳಸಿದ ಪ್ರಧಾನಿ ಮೋದಿ

pm modi.jpg
15/08/2026

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲಿಂದ ದೇಶವನ್ನು ಉದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದೇಶದ ಜನರನ್ನು ಸಂಬೋಧಿಸಲು “ಮೇರೆ ಪ್ಯಾರೇ ದೇಶವಾಸಿಯೋಂ” (ನನ್ನ ಪ್ರೀತಿಯ ದೇಶವಾಸಿಗಳೇ) ಎಂಬ ಪದವನ್ನು ಅತ್ಯಂತ ಹೆಚ್ಚು ಬಾರಿ ಬಳಸಿದ್ದಾರೆ. ಪ್ರಧಾನಿಯವರ ಇಡೀ ಭಾಷಣದಲ್ಲಿ ಈ ಪದಗಳು ಸುಮಾರು 40 ಬಾರಿ ಮರುಕಳಿಸಿದೆ.

ಪ್ರಧಾನಿ ಮೋದಿ ಅವರ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ಸುಮಾರು 75 ನಿಮಿಷಗಳ ಕಾಲ (1 ಗಂಟೆ 15 ನಿಮಿಷ) ನಡೆದಿತ್ತು. ಇದು ಕೆಂಪು ಕೋಟೆಯಿಂದ ಅವರು ಮಾಡಿದ 13 ನೇ ಸತತ ಭಾಷಣವಾಗಿದ್ದು, ಅವರ ಸುದೀರ್ಘ ಭಾಷಣಗಳ ಪಟ್ಟಿಯಲ್ಲಿ 4 ನೇ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿದೆ.

ತಮ್ಮ ಭಾಷಣದ ಉದ್ದಕ್ಕೂ ‘ಮೇರೆ ಪ್ಯಾರೇ ದೇಶವಾಸಿಯೋಂ’ ಎಂದು ಪದೇ ಪದೇ ಉಲ್ಲೇಖಿಸುವ ಮೂಲಕ ಪ್ರಧಾನಿ ದೇಶದ ಪ್ರತಿಯೊಬ್ಬ ಪ್ರಜೆಯೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಸಾಧಿಸಲು ಯತ್ನಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

mobil chat sitesi
Exit mobile version