ಪೊಲೀಸ್ ನೇಮಕಾತಿ: ದೈಹಿಕ ಮಾನದಂಡ ವಿನಾಯಿತಿಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ ತೃತೀಯಲಿಂಗಿಗಳು

high court
19/10/2026

ಬೆಂಗಳೂರು: ರಾಜ್ಯ ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ತೃತೀಯಲಿಂಗಿ ಅಭ್ಯರ್ಥಿಗಳಿಗೆ ಸೂಕ್ತ ದೈಹಿಕ ಮಾನದಂಡ ಮತ್ತು ಸಡಿಲಿಕೆಗಳನ್ನು ಕಲ್ಪಿಸದೇ ಇರುವುದನ್ನು ಹಾಗೂ ಕೆಲವು ಪಡೆಗಳ ನೇಮಕಾತಿಯಿಂದ ಸಂಪೂರ್ಣವಾಗಿ ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಏಳು ಮಂದಿ ತೃತೀಯಲಿಂಗಿ ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜೆ. ವಿಕಾಶ್ ಸೇರಿದಂತೆ ಇತರ ಅಭ್ಯರ್ಥಿಗಳು ಸಲ್ಲಿಸಿರುವ ಈ ಅರ್ಜಿಯಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ನೇಮಕಾತಿ ಪ್ರಾಧಿಕಾರಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. 1977ರ ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳಡಿ ತೃತೀಯಲಿಂಗಿಗಳಿಗೆ ಲಭ್ಯವಿರುವ ಶೇ.1ರಷ್ಟು ಸಮತಲ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ ಎಂಬುದು ಅರ್ಜಿದಾರರ ಮುಖ್ಯ ಆಕ್ಷೇಪವಾಗಿದೆ.

ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ನೇಮಕಾತಿಯಲ್ಲಿ ಅರ್ಜಿದಾರರು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ, ಪುರುಷ ಸಿಸ್‌ ಜೆಂಡರ್‌ ಗಳಿಗೆ ನಿಗದಿಪಡಿಸಿದ ಸವಾಲಿನ ದೈಹಿಕ ಮಾನದಂಡಗಳನ್ನೇ (1,600 ಮೀ. ಓಟ, ಶಾಟ್‌ ಪುಟ್ ಇತ್ಯಾದಿ) ಅನ್ವಯಿಸಿದ್ದರಿಂದ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅನರ್ಹಗೊಂಡಿದ್ದಾರೆ. ‘ಪುರುಷ ತೃತೀಯಲಿಂಗಿ’ ವರ್ಗದ ಬದಲು ‘ಇತರೆ’ ವರ್ಗ ಕಲ್ಪಿಸಿ ಸಡಿಲಿಕೆಗಳನ್ನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಅಲ್ಲದೆ, ಕೆಎಸ್‌ ಆರ್‌ ಪಿ, ಐಆರ್‌ ಬಿ, ಕೆಎಆರ್‌ ಪಿ ಹಾಗೂ ಕೆಎಸ್ ಐಎಸ್ ಎಫ್ ನೇಮಕಾತಿಗಳಿಂದ ತೃತೀಯಲಿಂಗಿಗಳನ್ನು ಹೊರಗಿಟ್ಟು ಸರ್ಕಾರ ಹೊರಡಿಸಿರುವ ನೂತನ ಆದೇಶಗಳು ಮತ್ತು ಅಧಿಸೂಚನೆಗಳನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಸೂಕ್ತ ನಿಯಮಾವಳಿಗಳಿಲ್ಲದೆ ಕೇವಲ ಮೀಸಲಾತಿ ನೀಡಿದರೆ ಅದು ಅರ್ಥಹೀನವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version